ಮಡಿಕೇರಿ, ಅ. 16: ದೂರ ದೂರುಗಳಿಂದ ಬರುವ, ಸಂಸಾರಸ್ಥ ಸರಕಾರಿ ಉದ್ಯೋಗಿಗಳಿಗೆ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ವಸತಿ ಗೃಹಗಳನ್ನು ನಿರ್ಮಿಸಿಕೊಡುತ್ತದೆ. ಅದನ್ನು ಪಡೆದುಕೊಂಡವರು ನಿಯಮಾನುಸಾರ ಉಪಯೋಗಿಸಿ ಕೊಳ್ಳಬೇಕಿದೆ. ಆದರೆ, ಇಲ್ಲಿ ಓರ್ವ ಅಧಿಕಾರಿ ಸರಕಾರದ ವಸತಿ ಗೃಹವನ್ನು ದುರುಪಯೋಗ ಪಡಿಸಿಕೊಂಡು ಸದ್ಯಕ್ಕೆ ಅದನ್ನೇ ಹೋಂ ಸ್ಟೇಯಂತೆ ಮಾಡಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.ಇಲ್ಲಿನ ಸುದರ್ಶನ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ರಸ್ತೆ ಬದಿ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹಗಳಿವೆ. ಒಟ್ಟು 4 ವಸತಿಗೃಹಗಳಿದ್ದು, ಮೂರರಲ್ಲಿ ಸಂಸಾರಸ್ಥ ಸರಕಾರಿ ನೌಕರರು ವಾಸವಿದ್ದಾರೆ. ಇನ್ನೊಂದು ಕಳೆದ ಮಡಿಕೇರಿ, ಅ. 16: ದೂರ ದೂರುಗಳಿಂದ ಬರುವ, ಸಂಸಾರಸ್ಥ ಸರಕಾರಿ ಉದ್ಯೋಗಿಗಳಿಗೆ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ವಸತಿ ಗೃಹಗಳನ್ನು ನಿರ್ಮಿಸಿಕೊಡುತ್ತದೆ. ಅದನ್ನು ಪಡೆದುಕೊಂಡವರು ನಿಯಮಾನುಸಾರ ಉಪಯೋಗಿಸಿ ಕೊಳ್ಳಬೇಕಿದೆ. ಆದರೆ, ಇಲ್ಲಿ ಓರ್ವ ಅಧಿಕಾರಿ ಸರಕಾರದ ವಸತಿ ಗೃಹವನ್ನು ದುರುಪಯೋಗ ಪಡಿಸಿಕೊಂಡು ಸದ್ಯಕ್ಕೆ ಅದನ್ನೇ ಹೋಂ ಸ್ಟೇಯಂತೆ ಮಾಡಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಸುದರ್ಶನ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ರಸ್ತೆ ಬದಿ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹಗಳಿವೆ. ಒಟ್ಟು 4 ವಸತಿಗೃಹಗಳಿದ್ದು, ಮೂರರಲ್ಲಿ ಸಂಸಾರಸ್ಥ ಸರಕಾರಿ ನೌಕರರು ವಾಸವಿದ್ದಾರೆ. ಇನ್ನೊಂದು ಕಳೆದ ದುರ್ಬಳಕೆ

ಈ ವಸತಿಗೃಹ ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ನಟೇಶ್ ಎಂಬವರಿಗೆ ಮಂಜೂರಾಗಿದೆ. ಆದರೆ ಅವರು ಅಲ್ಲಿ ತಂಗುತ್ತಿಲ್ಲ. ಬದಲಿಗೆ ಇಲಾಖಾ ನೌಕರನೊಬ್ಬ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಸಿಬ್ಬಂದಿ ಮತ್ತೊಂದು ವಸತಿಗೃಹದಲ್ಲಿ ತಂಗಿದ್ದು, ಇದನ್ನು ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇವರು ಹೊಸ ಮನೆ ನಿರ್ಮಿಸುತ್ತಿದ್ದು, ಮನೆಕೆಲಸಕ್ಕೆ ಬೇಕಾದ ಮರ - ಮುಟ್ಟುಗಳ ಕೆಲಸ ಮಾಡುವ ಗೋದಾಮಾಗಿ ಈ ಹಿಂದೆ ಬಳಸಿಕೊಂಡಿದ್ದರು. ನಂತರ ಖಾಲಿ ಬಿದ್ದಿದ್ದ ಮನೆಯಲ್ಲಿ ಇದೀಗ ಯಾರಿಗೋ ತಂಗಲು ಬಿಟ್ಟುಕೊಟ್ಟಿದ್ದಾರೆ. ರಾತ್ರಿ ಬಂದು ತಂಗಿ ಹಗಲು ವೇಳೆ ಹೊರಗಡೆ ಹೋಗುವ ‘ಅತಿಥಿ’ಗಳು ಅಸಭ್ಯ ವರ್ತನೆ ಹಾಗೂ ಮನೆ ಸುತ್ತಲೂ ತಿಂದು ಎಸೆದ ತ್ಯಾಜ್ಯಗಳನ್ನು ಹಾಕಿ ಮಲಿನ ಮಾಡುತ್ತಿರುವದು ಕಂಡು ಬಂದಿದೆ. ವಸತಿ ಗೃಹಗಳ ಲಭ್ಯತೆಯಿಲ್ಲದೆ ಎಷ್ಟೋ ಮಂದಿ ಅಧಿಕಾರಿಗಳು, ನೌಕರರು ಬಾಡಿಗೆ ಮನೆಗಳಲ್ಲಿ, ಲಾಡ್ಜ್‍ಗಳಲ್ಲಿ ತಂಗಿರುವಾಗ ಇರುವ ಇಂತಹ ಗೃಹಗಳನ್ನು ದುರುಪಯೋಗ ಪಡಿಸಿಕೊಳ್ಳುವದು ಎಷ್ಟು ಸರಿ.?

ಜಿಲ್ಲಾಧಿಕಾರಿಗಳೇ ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕಿದೆ.