ಮಡಿಕೇರಿ. ಅ. 17 : ಮಡಿಕೇರಿಯ ಶ್ರೀ ಕಂಚಿಕಾಮಾಕ್ಷಿಯಮ್ಮ ಮತ್ತು ಮುತ್ತಮಾರಿಯಮ್ಮ ದೇವಾಲಯ ವತಿಯಿಂದ 54 ನೇ ದಸರಾ ಉತ್ಸವದ ಮೂರ್ತಿಗಳಿಗೆ ಶಾಂತಿಪೂಜೆ ಅಂಗವಾಗಿ ದಶಮಂಟಪಗಳ ಹಿರಿಯರನ್ನು ಮತ್ತು ಕರಗ ಅರ್ಚಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದಲ್ಲಿ ಜರುಗಿದ ಶಾಂತಿ ಪೂಜೆ ಸಂದರ್ಭ ಪೇಟೆ ಶ್ರೀ ರಾಮಮಂದಿರದ ಗಜರಾಜನಾಯ್ಡು, ದೇಚೂರು ಶ್ರೀರಾಮಮಂದಿರದ ರವಿಸಿಂಗ್, ದಂಡಿನಮಾರಿಯಮ್ಮ ದೇವಾಲಯದ ಎಸ್. ಸಿ. ಸುಬ್ರಮಣಿ, ಚೌಡೇಶ್ವರಿ ದೇವಾಲಯದ ಬಿ. ಕೆ. ಮೋಹನ್, ಕಂಚಿಕಾಮಾಕ್ಷಿಯಮ್ಮ ದೇವಾಲಯದ ಜಿ. ಎ. ಚಾಮಿ, ಕೋದಂಡ ರಾಮ ದೇವಾಲಯದ ಕೆ. ಎಂ. ಬಿ. ಗಣೇಶ್, ಕೋಟೆ ಗಣಪತಿ ದೇವಾಲಯದ ಬಿ. ಎಸ್. ಮೋಹನ್, ಕೋಟೆ ಮಾರಿಯಮ್ಮ ದೇವಾಲಯದ ಕೃಷ್ಣಶೆಟ್ಟಿ, ಕುಂದುರುಮೊಟ್ಟೆ ದೇವಾಲಯದ ಟಿ. ಪಿ. ರಾಜೇಂದ್ರ, ಕರವಲೆಬಾಡಗದ ಎಂ. ಬಿ. ದೇವಯ್ಯ ಹಾಗೂ ಕರಗ ಅರ್ಚಕರುಗಳಾದ ಪಿ. ಸಿ. ಮಧುರಯ್ಯ, ಪಿ. ಎಂ. ನವೀನ್ ಕುಮಾರ್ (ಕಂಚಿಕಾಮಾಕ್ಷಿ), ಲೋಕನಾಥ್, ಜಿ. ಎ. ಉಮೇಶ್, ಕೃಷ್ಣರಾಜ್, (ದಂಡಿನ ಮಾರಿಯಮ್ಮ), ಬಾಲಕೃಷ್ಣ, ಪಿ. ಪಿ. ಚಾಮಿ, ಎಂ. ಹರೀಶ್, (ಕುಂದುರುಮೊಟ್ಟೆ), ಪಿ.ಬಿ.ಉಮೇಶ್ ಸುಬ್ರಮಣಿ , ಪಿ.ಬಿ. ಅನೀಶ್ ಕುಮಾರ್ (ಕೋಟೆ ಮಾರಿಯಮ್ಮ) ಹಾಗೂ ಬೆಂಗಳೂರಿನ ಉದ್ಯಮಿ ಚೆರಿಯಮನೆ ರತ್ನಕುಮಾರ್ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ದಸರಾ ಉತ್ಸವ ಈ ವರ್ಷ ಅತ್ಯಂತ ಅಚ್ಚುಕಟ್ಟಾಗಿ ಜರುಗಲು ಕಾರಣಕರ್ತ ರಾದವರನ್ನು ಶ್ಲಾಘಿಸಿದರಲ್ಲದೇ, ನೇತ್ರದಾನ, ಪುಸ್ತಕ ವಿತÀರಣೆಯಂತÀ ವಿಭಿನ್ನ ಕಾರ್ಯಕ್ರಮಗಳ ಮೂಲಕ ಶ್ರೀ ಕಂಚಿಕಾಮಾಕ್ಷಿ ಉತ್ಸವ ಸಮಿತಿ ಶ್ಲಾಘನಾರ್ಹ ಯೋಜನೆ ಹಮ್ಮಿಕೊಂಡಿದೆ ಎಂದರು. ಸನ್ಮಾನಿತರು ಕೂಡ ಈ ಸಂದರ್ಭ ಮಾತನಾಡಿದರು.

ಬಾಲಕರ ಬಾಲಮಂದಿರದ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವೀರಾಜಪೇಟೆ ತಹಶೀಲ್ದಾರ್ ಕಛೇರಿ ಅಧಿಕಾರಿ ಪ್ರವೀಣ್ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್. ಟಿ. ಕ್ರೀಡಾ ಸಮಿತಿ ಅಧ್ಯಕ್ಷ ಬಿ. ಕೆ. ಜಗದೀಶ್, ಕಾರ್ಯದರ್ಶಿ ಬಿ.ಕೆ.ಅರುಣ್ ಕುಮಾರ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಂಚಿಕಾಮಾಕ್ಷಿ ದೇವಾಲಯದ ಜಿ. ವಿ. ರವಿಕುಮಾರ್ ನಿರೂಪಿಸಿದರು.