ಗೋಣಿಕೊಪ್ಪಲು, ಅ. 17: ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಅಲ್ಲಿನ ಅಜ್ಜರಕಾಡು ಮೈದಾನದಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆ ಹಾಗೂ ಪುರುಷರಿಗೆ ನಡೆದ ಅಂತರ್ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್‍ನಲ್ಲಿ ಕೊಡಗು ಜಿಲ್ಲೆಗೆ 20ಕ್ಕೂ ಅಧಿಕ ಪದಕಗಳನ್ನು ಪಡೆದಿದೆ.

ಜಿಲ್ಲೆಯ ವಿವಿಧ ಭಾಗದಿಂದ 11 ಮಂದಿ ಕ್ರೀಡಾಪಟುಗಳು ಭಾಗವಹಿಸಿ ಪದಕ ಪಡೆದು ಕೊಂಡರು. ಕ್ರೀಡಾಕೂಟದಲ್ಲಿ 100 ಮೀ, 200, 400, 800, 1500 ಮೀ. ಓಟ, 5 ಸಾವಿರ ಕಿ. ಮೀ. ನಡಿಗೆ, ಹೈಜಂಪ್, ಲಾಂಗ್‍ಜಂಪ್, ಟ್ರಿಪ್‍ಲ್ ಜಂಪ್, ಶಾಟ್‍ಪುಟ್, ಜಾವ್ಲಿನ್ ಥ್ರೋ, ಹ್ಯಾಮರ್ ಥ್ರೋ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದುಕೊಂಡರು.

ಮಾರಮಾಡ ಮಾಚಮ್ಮ ಅವರಿಗೆ 3 ಚಿನ್ನ, ಚೆಕ್ಕೇರ ಚಂದ್ರಪ್ರಕಾಶ್‍ಗೆ 1 ಚಿನ್ನ, 1 ಬೆಳ್ಳಿ, ಇಟ್ಟೀರ ಪೊನ್ನಣ್ಣಗೆ 2 ಕಂಚು, ಚೆಕ್ಕೇರ ರಾಜೇಶ್‍ಗೆ 1 ಬೆಳ್ಳಿ ಪದಕ ಶೈಲಜಾಗೆ 2 ಚಿನ್ನ, ಚೇಮೀರ ಪ್ರೇಮಾ ಸೀತಮ್ಮಗೆ 1 ಚಿನ್ನ, 1 ಬೆಳ್ಳಿ, ವಿದ್ಯಾಗೆ 1 ಚಿನ್ನ, 1 ಬೆಳ್ಳಿ, 1 ಕಂಚು, ಶೋಭಾ ಅವರಿಗೆ 1 ಚಿನ್ನ, 2 ಬೆಳ್ಳಿ, ಇಂದಿರಾ ವರಿಗೆ 1 ಚಿನ್ನ, 2 ಬೆಳ್ಳಿ, ಬಲ್ಯಮೀದೇರಿರ ಪ್ರಕಾಶ್‍ಗೆ 1 ಚಿನ್ನ, 2 ಬೆಳ್ಳಿ, ಕೇಚಮಾಡ ತಿಮ್ಮಯ್ಯಗೆ 1 ಚಿನ್ನ, 1 ಬೆಳ್ಳಿ, 1 ಕಂಚು ಲಭಿಸಿದೆ.