ವೀರಾಜಪೇಟೆ, ಅ.17: ಅಮ್ಮತ್ತಿ ಒಂಟಿಯಂಗಡಿಯ ಹಿಂದೂ ಮಲೆಯಾಳಿ ಸಂಘದಿಂದ ತಾ. 22ರಂದು ದ್ವಿತೀಯ ವರ್ಷದ ಓಣಂ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಪಿ.ಕೆ ಭಾಸ್ಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ಅವರು ಅಮ್ಮತ್ತಿ ಒಂಟಿಯಂಗಡಿಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಸಿಂಗಾರಿ ವಾದ್ಯಮೇಳದೊಂದಿಗೆ ಅದ್ದೂರಿಯ ಓಣಾಘೋಷಾ ಅಯ್ಯಪ್ಪ ದೇವಾಲಯದಿಂದ ಪ್ರಾರಂಭ ಗೊಳ್ಳುತ್ತದೆ. ನಂತರ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಹಿಂದೂ ಮಲಯಾಳಿ ಸಂಘದ ಪ್ರಧಾನ ಕಾರ್ಯದರ್ಶಿ ನಂದ ಕುಮಾರ್ ಮಾತನಾಡಿ ಸಿಂಗಾರಿ ವಾದ್ಯ ಮೇಳದ ಓಣಾಘೋಷ ಯಾತ್ರೆಗೆ ಪಿ.ಕೆ. ಭಾಸ್ಕರ್ ಚಾಲನೆ ನೀಡಲಿದ್ದಾರೆ. ಮೆರವಣಿಗೆಯ ನಂತರ ನಡೆಯುವ ಸಮಾರಂಭದ ಅಧ್ಯಕ್ಷತೆ ಯನ್ನು ಅಮ್ಮತ್ತಿ ಒಂಟಿಯಂಗಡಿ ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಕೆ.ಸಿ ಪುಷ್ಕರನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಣ್ಣಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಎನ್ ಮನೋಜ್, ಮಡಿಕೇರಿ ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಕೆ.ಎಸ್ ರಮೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ಬಿ.ಸಿ. ಮಂಜುನಾಥ್, ಕೆ.ಬಾಬು, ಕೆ.ಕೆ. ಶ್ರೀನಿವಾಸ್, ಪಿ.ಡಿ. ಪ್ರಕಾಶ್, ಕೋರಂಡ ಬೆಳ್ಯಪ್ಪ, ಶಶಿಕುಮಾರ್, ಬಾಲಕೃಷ್ಣ, ಸಿ.ಎ.ಲಿಲ್ಲಿ, ಪಿ.ಎನ್. ಅಚ್ಯುತನ್, ಶಿವನ್, ಪಿ.ಸಿ.ಮೋಹನ್, ಹಾಗೂ ಕೆ. ಚಂದ್ರ ಭಾಗವಹಿಸುವರು ಎಂದು ತಿಳಿಸಿದರು.

ಸಮಿತಿಯ ನಿರ್ದೇಶಕ ಟಿ.ಎಂ. ಸುನಿಲ್ ಮಾತನಾಡಿ ಬೆಳಿಗ್ಗೆ 7ಗಂಟೆಯಿಂದ 9ಗಂಟೆಯವರೆಗೆ ನಡೆಯುವ ಪೂಕಳಂ ಸ್ಪರ್ಧೆಯನ್ನು ರಾಧಾ ವಿಜಯನ್ ಉದ್ಘಾಟಿಸುವರು. ಅಪರಾಹ್ನ 2 ಗಂಟೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸೋಲೊ ಹಾಗೂ ಗ್ರೂಪ್ ಡಾನ್ಸ್‍ಗೆ ಅವಕಾಶವಿರುತ್ತದೆ. ಕಳೆದ ಸಾಲಿನಲ್ಲಿ ಎಸ್,ಎಸ್,ಎಲ್,ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದೂ ಮಲೆಯಾಳಿ ವಿದ್ಯಾರ್ಥಿಗಳಿಗೆ ಹಾಗೂ ಅಮ್ಮತ್ತಿ ಒಂಟಿಯಂಗಡಿ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಎರಡು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವದು ಎಂದು ಹೇಳಿದರು.