ಮಡಿಕೇರಿ, ಅ.17 : ಹೆಬ್ಬಾಲೆ ಗ್ರಾಮದ ಸರ್ವೆ ಸಂಖ್ಯೆ 8/1 ಮತ್ತು 8/2ರಲ್ಲಿ ಯರವ ಹಾಗೂ ಕುರುಬ ಜನಾಂಗದ 150 ಕುಟುಂಬಗಳು ವಾಸವಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟವನ್ನು ಎದುರಿಸುತ್ತಿವೆ. ಜಿಲ್ಲಾಡಳಿತ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್. ಆರ್. ಪರಶುರಾಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸುಮಾರು 80 ವರ್ಷಗಳಿಂದ ಗಿರಿಜನ ಕುಟುಂಬ ಗಳಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ, ಶೌಚಾಲಯ ಮತ್ತು ಸರಕಾರದ ಯಾವದೇ ಮೂಲಭೂತ ಸೌಲಭ್ಯಗಳು ದೊರೆತ್ತಿಲ್ಲ. ವಿದ್ಯಾರ್ಥಿಗಳು ಕೂಡ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗಿರಿಜನರ ಅಭಿವೃದ್ಧಿಗಾಗಿ ಸರಕಾರದÀ ಅನೇಕ ಯೋಜನೆಗಳು ಜಾರಿಯಲ್ಲಿದ್ದರೂ ಹೆಬ್ಬಾಲೆ ಹಾಡಿ ಗಳಿಗೆ ಯಾವುದೂ ಲಭ್ಯವಾಗುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯೊಳಗೆ ಹಾಡಿ ಕುಟುಂಬಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡ ದಿದ್ದಲ್ಲಿ ಚುನಾವಣೆ ಯನ್ನು ಬಹಿಷ್ಕರಿಸುವದಾಗಿ ಎಚ್ಚರಿಕೆ ನೀಡಿದರು. ಮೂಲಭೂತ ಸೌಲಭ್ಯ ಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಅಹೋ ರಾತ್ರಿ ಮುಷ್ಕರ ನಡೆಸಲಾಗುವದೆಂದರು.
ಸ್ಥಳೀಯ ದೇವಾಲಯ ವೊಂದರ ಸಮಿತಿ ದಲಿತ ಕುಟುಂಬಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಪರಶುರಾಮ್ ಇದೇ ಸಂದರ್ಭ ಆರೋಪಿಸಿದರು.
ದಲಿತ ಕುಟುಂಬಗಳು ವಾಸವಿರುವ ಜಾಗ ಪೈಸಾರಿ ಎಂದು ಆರ್‍ಟಿಸಿಯಲ್ಲಿದ್ದರೂ ದೇವಾಲಯ ಸಮಿತಿ ಇದು ದೇವರಕಾಡು ಎಂದು ದೌರ್ಜನ್ಯ ನಡೆಸುತ್ತಿದೆ. ಆದರೆ 1988 ರಲ್ಲಿ ಸುಮಾರು 22 ಮನೆಗಳಿಗೆ ಹಕ್ಕು ಪತ್ರ ನೀಡಿದ್ದು, 1990 ರಿಂದ ಈ ಜಾಗಕ್ಕೆ ಕಂದಾಯವನ್ನು ಪಾವತಿಸಲಾಗುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವದೇ ಸ್ಪಂದನೆ ದೊರೆತ್ತಿಲ್ಲ ವೆಂದು ಪರಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಖಜಾಂಚಿ ಹೆಚ್.ಎನ್.ಕುಮಾರ್ ಮಹಾದೇವ್, ಪಿ.ಜೆ.ಸುಬ್ರಮಣಿ, ಪಿ.ಎಂ.ಮಾದ, ಪಿ.ಸಿ. ಸುಬ್ರಮಣಿ ಹಾಗೂ ರಾಮು ಉಪಸ್ಥಿತರಿದ್ದರು.