ಮಡಿಕೇರಿ, ಅ. 17: ನೂತನವಾಗಿ ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಸಾಹಿತಿ ಹಾಗೂ ಕಲಾವಿದರನ್ನು ಸಂಘಟಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಅವರ ನೇತೃತ್ವದಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸಮಾನ ಮನಸ್ಕರ ಸಭೆ ನಡೆಯಿತು. ಹಲವು ಲೇಖಕರು, ಕಲಾವಿದರು ಹಾಗೂ ಆಸಕ್ತರು ಆಗಮಿಸಿದ್ದು, ಈ ಹಿಂದೆ ಅಸ್ತಿತ್ವದಲ್ಲಿದ್ದ ಕೊಡಗು ಲೇಖಕರು ಹಾಗೂ ಕಲಾವಿದರ ಬಳಗವನ್ನು ನೆನಪು ಮಾಡಿಕೊಂಡರು. ಅದೇ ರೀತಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಮತ್ತೆ ಹಮ್ಮಿಕೊಳ್ಳಲು, ಲೇಖಕರು, ಕಲಾವಿದರು ಹಾಗೂ ಈ ಎರಡೂ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಲು ಕಾರ್ಯೋನ್ಮಖರಾಗಲು ನಿರ್ಧಾರ ತೆಗೆದು ಕೊಳ್ಳಲಾಯಿತು. ಇದಕ್ಕಾಗಿ ನೂತನವಾಗಿ ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗವನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಕೇಶವ್ ಕಾಮತ್, ಉಪಾಧ್ಯಕ್ಷರುಗಳಾಗಿ ಎಂ.ಇ. ಮೊಹಿದ್ದೀನ್, ಪುದಿಯನೆರವನ ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಐತಿಚಂಡ ರಮೇಶ್ ಉತ್ತಪ್ಪ, ಕಾರ್ಯದರ್ಶಿ ಯಾಗಿ ಲತೀಫ್ ಮಾಸ್ತರ್, ಖಜಾಂಚಿಯಾಗಿ ಡಿ.ರಾಜೇಶ್ ಪದ್ಮನಾಭ, ನಿರ್ದೇಶಕರುಗಳಾಗಿ ಬಿ.ಎ. ಷಂಶುದ್ದೀನ್, ಸುನೀತಾ ಪಿ.ಪಿ., ಲಿಯಾಕತ್ ಆಲಿ, ವಿಲ್‍ಫ್ರೆಡ್ ಕ್ರಾಸ್ತ, ಲೋಕನಾಥ್ ಅಮೆಚೂರು, ಬಿ.ಆರ್. ಸತೀಶ್, ರಫೀಕ್ ತೂಚಮಕೇರಿ, ಟಿ.ಜೆ. ಪ್ರೇಮ್ ಕುಮಾರ್, ಕೆ.ವಿ. ಉಮೇಶ್ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಬರಹಗಾರರು ಹಾಗೂ ಕಲಾವಿದರನ್ನು ಸಂಘಟಿಸಿ ಪ್ರೋತ್ಸಾಹ ನೀಡುವದು, ಜಿಲ್ಲೆಯಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಸಂಘಟಿಸುವದು, ಕಾರ್ಯಾಗಾರ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುವದು, ಶಾಲಾ ಕಾಲೇಜು ಗಳಲ್ಲಿ ವಿದ್ಯಾರ್ಥಿ ಬಳಗ ರಚಿಸಿ ಅವರನ್ನು ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳು ವದು ಸೇರಿದಂತೆ ಹಲವು ಉದ್ದೇಶ ಗಳನ್ನು ಬಳಗ ಹೊಂದಿದೆ.
ಜಿಲ್ಲೆಯ ಸಾಹಿತಿಗಳು, ಕಲಾವಿದರು ಹಾಗೂ ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಒಂದು ಸಾವಿರ ರೂ. ನೀಡಿ ಬಳಗದ ಜೀವಾವಧಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ಸದಸ್ಯತ್ವ ಸಂಗ್ರಹ ಹಾಗೂ ಕಾರ್ಯಕ್ರಮಗಳ ಆಯೋಜನೆ ಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ಬಿಡಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾಗಿ ಆಯ್ಕೆಗೊಂಡವರಲ್ಲದೆ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಬಿ.ಆರ್.ಜೋಯಪ್ಪ, ನಾಗೇಶ್ ಕಾಲೂರು, ಕಸಾಪ. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಶ್ರೀಧರ್ ನೆಲ್ಲಿತ್ತಾಯ, ಹರೀಶ್ ಸರಳಾಯ, ಅಬ್ದುಲ್ ರೆಹಮಾನ್, ಕೆ.ಟಿ. ಬೇಬಿ ಮ್ಯಾಥ್ಯು, ಕೆ.ಆರ್. ವಿದ್ಯಾಧರ್, ಬಿ.ಎನ್. ಮನುಶೆಣೈ, ಶ್ರೀಧರ್ ಹೂವಲ್ಲಿ, ಕೆ.ಆರ್. ಬಾಲಕೃಷ್ಣ ರೈ, ಮಂದ್ರೀರ ಮೋಹನ್‍ದಾಸ್, ಎಂ. ಪಿ. ರಾಮರಾಜ, ಎನ್. ಮಹೇಶ್ ಮುಂತಾದವರು ಪಾಲ್ಗೊಂಡಿದ್ದರು.