ಗೋಣಿಕೊಪ್ಪಲು, ಅ. 17: ಹಾಕಿಕೂರ್ಗ್ ವತಿಯಿಂದ ನವೆಂಬರ್‍ನಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭಗೊಳ್ಳಲಿರುವ ಶಾಲಾ-ಕಾಲೇಜು ಮಟ್ಟದ ಹಾಕಿ ಟೂರ್ನಿಗೆ ತಂಡಗಳ ನೋಂದಣಿ ಆರಂಭವಾಗಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ಟೂರ್ನಿ ನಡೆಯಲಿದ್ದು, 14 ವರ್ಷದೊಳಗಿನ ವಿಭಾಗದಲ್ಲಿ 8 ನೇ ತರಗತಿವರೆಗಿನ ಕ್ರೀಡಾಪಟುಗಳು, 17 ವರ್ಷದೊಳಗಿನ ತಂಡದಲ್ಲಿ 10 ನೇ ತರಗತಿವರೆಗಿನ ಆಟಗಾರರು, ಹಾಗೂ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿಭಾಗಕ್ಕೆ ತಂಡಗಳ ಹೆಸರುಗಳನ್ನು ತಾ. 30 ರ ಒಳಗೆ ನೋಂದಾಯಿಸಿ ಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 9483394515, 9342421085 ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಹಾಕಿಕೂರ್ಗ್ ಪ್ರಕಟಣೆ ತಿಳಿಸಿದೆ.