ಸೋಮವಾರಪೇಟೆ,ಅ.16: ಕಳೆದ ಹತ್ತು ವರ್ಷಗಳ ಹಿಂದೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ತೆರಳಿ ತರಕಾರಿ ವ್ಯಾಪಾರ, ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿದ ತಾಲೂಕಿನ ಯುವಕನೋರ್ವ ಇಂದು ಇನ್‍ಸರ್ಚ್ ಆಫ್ ಬಾಪು ಎಂಬ ಕಿರುಚಿತ್ರ ನಿರ್ಮಿಸಿದ್ದು, ಕನ್ನಡ ಚಲನ ಚಿತ್ರ ರಂಗದಲ್ಲಿ ಗಟ್ಟಿಯಾಗಿ ಬೇರೂರುವ ಅವಕಾಶಕ್ಕಾಗಿ ಕಾಯುತ್ತಿದ್ದಾನೆ.

ಸೋಮವಾರಪೇಟೆ ಸಮೀಪದ ಹೆಗ್ಗುಳ ದೀಣೆಕೊಪ್ಪ ಗ್ರಾಮದ ಜಿ.ಪಿ.ಸೋಮಶೇಖರ್ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಲಾವಿಧನಾಗಿ ಬೆಳೆಯುತ್ತಿದ್ದು, ತನ್ನಿಷ್ಟದ ಚಿತ್ರರಂಗ ಕೈಬೀಸಿ ಕರೆದಿದೆ. ಚಿತ್ರ ನಿರ್ದೇಶಕರುಗಳಾದ ಆರ್ಯನ್ ಶಿವಕುಮಾರ್ ಹಾಗೂ ಅರವಿಂದ್ ರಾಜ್ ಅವರುಗಳು ಸ್ಯಾಂಡಲ್‍ವುಡ್‍ಗೆ ಪರಿಚಯಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳ ಬಗೆಗಿನ "ಇನ್ ಸರ್ಚ್ ಆಫ್ ಬಾಪು" ಕಿರುಚಿತ್ರವನ್ನು ಹೆಗ್ಗುಳ ಸೋಮಶೇಖರ್ ತೆರೆಗೆ ತಂದಿದ್ದಾರೆ. ನಿರ್ಮಾಪಕರಾಗಿರುವ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆರ್ಯನ್ ಶಿವಕುಮಾರ್ ನಿರ್ದೇಶನ ಮಾಡಿದ್ದಾರೆ.

ಸೋಮಶೇಖರ್ ಅವರು 2001ರಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಉಪಾಧ್ಯಕ್ಷರಾಗಿದ್ದ ಸಂದರ್ಭ, ಸಮಾಜಸೇವೆ ಹಾಗೂ ಸಾಂಸ್ಕøತಿಕ ಚಟುವಟಿಕೆಗೆ ಸಂಬಂಧ ಪಟ್ಟಂತೆ ಯುವ ಪ್ರಶಸ್ತಿಗೆ ಭಾಜನರಾಗಿ ದ್ದರು. ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿದ್ದ ಅವರು, ತಾಲೂಕಿನಲ್ಲಿ ಯುವಜನ ಮೇಳಗಳನ್ನು ಆಯೋಜಿಸಿ, ಗ್ರಾಮೀಣ ಸಂಸ್ಕøತಿ ಮತ್ತು ನೃತ್ಯ ಪ್ರಕಾರಗಳ ಪ್ರದರ್ಶನಕ್ಕೆ ಉತ್ತೇಜನ ನೀಡಿದ್ದರು. ನಂತರ ಜಾಗೃತಿ ಬೀದಿ ನಾಟಕಗಳಲ್ಲಿ ತೊಡಗಿಸಿಕೊಂಡು ನಂತರ ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿದ್ದರು.

ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟಂತೆ ಗೀತೆಗಳ ಆಲ್ಬಂ ತಯಾರಿಯಲ್ಲಿ ತೊಡಗಿದ್ದೇನೆ. ಕನ್ನಡ ಕಮರ್ಷಿಯಲ್ ಚಿತ್ರ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಶನಿವಾರಸಂತೆಯಲ್ಲಿ "ಇನ್ ಸರ್ಚ್ ಆಫ್ ಬಾಪು" ಚಿತ್ರದ ಉಚಿತ ಶೋ ಏರ್ಪಡಿಸುತ್ತೇನೆ ಎಂದು ಪತ್ರಿಕೆಯೊಂದಿಗೆ ಹೇಳಿದರು. ಆತ್ಮವಿಶ್ವಾಸ, ಛಲ, ಗುರಿ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ಸೋಮಶೇಖರ್ ಹೇಳಿದರು.

ಈ ಚಿತ್ರದಲ್ಲಿ ವಿಭಿನ್ನ ಕತೆಯಿದೆ. ಸ್ವಾತಂತ್ರ್ಯ ಭಾರತದಲ್ಲಿ ಗಾಂಧಿ ತತ್ವಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಆಗುತ್ತಿವೆಯಾ? ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಚಿತ್ರ ನಿರ್ಮಿಸಲಾಗಿದೆ. ಬಾಲ್ಯದಿಂದಲೂ ಗಾಂಧೀಜಿ ತತ್ವಗಳನ್ನು ಆಧರಿಸಿದ ಕತೆಯನ್ನು ಕೇಳಿಕೊಂಡು ಬಂದ ಮೋಹನ, ಅಪ್ಪನ ಬೋಧನೆಯಂತೆ ಗಾಂಧೀಜಿಯವರ ತತ್ವಗಳು, ಮೌಲ್ಯಗಳನ್ನು ಮೈಗೂಡಿಸಿಕೊಂಡಿರು ತ್ತಾನೆ. ಅವನಿಗೆ ತಿಳುವಳಿಕೆ ಬರುತ್ತಿದ್ದಂತೆಯೇ ಆ ತತ್ವಗಳನ್ನು ಜಾರಿ ಮಾಡಲು ಹೋಗಿ ಅಪಹಾಸ್ಯ ಕ್ಕೀಡಾಗುತ್ತಾನೆ. ಪ್ರೀತಿಸಿದವಳು ಕೂಡ ಇವನ ವರ್ತನೆ ಕಂಡು ದೂರವಾಗು ತ್ತಾಳೆ. ಅಂತಿಮವಾಗಿ ಅವನು ಏನಾಗುತ್ತಾನೆ? ಗಾಂಧಿಯ ತತ್ವಗಳು ಪಾಲನೆಯಾಗುತ್ತವೆಯೇ? ಸಾಮಾ ಜಿಕ ಮನ್ನಣೆ ದೊರಕುತ್ತದೆಯೇ? ಎಂಬದು ಚಿತ್ರದ ಕುತೂಹಲ ಎಂದು ಸೋಮಶೇಖರ್ ತಿಳಿಸಿದ್ದಾರೆ.