ಶ್ರೀಮಂಗಲ, ಅ. 17: ಬೇರೊಬ್ಬ ವ್ಯಕ್ತಿ ಅಥವಾ ಬೇರೆ ಸಂಸ್ಕøತಿಯನ್ನು ದೂಷಿಸುವ ನಿಟ್ಟಿನಲ್ಲಿ ನಾವು ಕೇಂದ್ರಿಕೃತವಾಗುವದಕ್ಕಿಂತ ನಮ್ಮಲ್ಲಿ ಸ್ವಾಭಿಮಾನವನ್ನು ಇಟ್ಟುಕೊಂಡು ನಮ್ಮ ತನವನ್ನು ಉಳಿಸಿಕೊಂಡಾಗ ಮಾತ್ರವೇ ಒಂದು ಸಂಸ್ಕøತಿಯ ಅಸ್ತಿತ್ವ ಉಳಿಯುತ್ತದೆ ಎಂದು ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.

ಅವರು ಕಿರುಂದಾಡು ಗ್ರಾಮದ ತÀಂಗೊಳಕೇರಿ - ಬಲ್ಯೋಡೆ ಮಂದ್ ನಲ್ಲಿ ಸಂಘಟನೆಯ ‘ಮಂದ್ ಮಾನಿಲ್ ಕೊಡವಡ ಕೊಯಿಮೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಕೊಡವ ಜನಾಂಗದಲ್ಲಿ ಒಗ್ಗಟ್ಟು ಎಂಬುದು ಕೊಡವರ ಮಂದ್ ಸಂಸ್ಕøತಿಯಲ್ಲಿ ವಿಲೀನ ಗೊಂಡಿದೆ. ಎಲ್ಲಾ ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಮರೆತು ಕೊಡವರು ಮಂದ್‍ನಲ್ಲಿ ಸಮಾಗಮ ಗೊಳ್ಳುತ್ತಾರೆ. ಊರಿನ ಎಲ್ಲರೂ ಮಂದ್ ಆಚರಣೆಗಳಲ್ಲಿ ತಪ್ಪದೆ ಭಾಗವಹಿಸುವದರ ಮೂಲಕ ಜನಾಂಗದ ಒಗ್ಗಟ್ಟನ್ನು ಕಾಪಾಡಿ ಕೊಳ್ಳಬಹುದು ಎಂದು ಹೇಳಿದರು.

ಕೊಡವ ಜನಾಂಗದಲ್ಲಿ ಹುಟ್ಟಿದ ಪ್ರತಿಯೊಬ್ಬ ಕೊಡವ ಸಂಸ್ಕøತಿಯ ರಾಯಬಾರಿಗಳು. ಜನಾಂಗವನ್ನು ಸಕರಾತ್ಮಕವಾಗಿ ಸಮಾಜದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದು ಅವರು ಕಿವಿ ಮಾತು ಹೇಳಿದರು. ಕೊಡವರ ಪುತ್ತರಿ ನಂತರ ನಡೆಸುವ ‘ಮನೆಪಾಟ್’ ಕಾರ್ಯಕ್ರಮವು ಕೋಟಿ ಕೋಟಿ ಯಜ್ಞಯಾಗಾದಿಗಳಿಗೆ ಸಮವಾಗಿದ್ದು, ಈ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಕೊಡವ ಸಂಪ್ರದಾಯಿಕ ಉಡುಪಿನಲ್ಲಿ ಸೇರಿದ್ದ ಊರಿನ ಹಿರಿಯರು, ಚೆರ್‍ಮಂದಂಡ ನಾಣಯ್ಯ ಅವರ ನೇತೃತ್ವದಲ್ಲಿ ‘ತಪ್ಪಡ್‍ಕ’ ಕಟ್ಟುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಊರಿನ ಹಿರಿಯರಾದ ಚೆರ್‍ಮಂದಂಡ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪನೆರವಂಡ ಮೇನಕ, ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿದರು. ಕುಮ್ಮಂಡ ಪೆಮ್ಮಯ್ಯ ಸ್ವಾಗತಿಸಿ, ಚೆರ್‍ಮಂದಂಡ ನಾಣಯ್ಯ ಹಾಗೂ ಬಾದುಮಂಡ ಮುತ್ತಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ತಂಗೊಳಕೇರಿ ಪುತ್ತರಿ ಬಳಗದ ಅಧ್ಯಕ್ಷ ಮಚ್ಚಂಡ ಸಾಬು ದೇವಯ್ಯ, ನೆಲ್ಲಮಕ್ಕಡ ಮಾದಯ್ಯ, ಗುಡಿಯಂಗಡ ಲಿಖಿನ್ ಮುಂತಾದವರು ಉಪಸ್ಥಿತರಿದ್ದರು.