ಸೋಮವಾರಪೇಟೆ, ಅ.17 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ಸಮೀಪದ ಹಾನಗಲ್ಲು ಬಾಣೆಯಿಂದ ಕಾನ್ವೆಂಟ್ ಬಾಣೆಗೆ ತೆರಳುವ ರಸ್ತೆಯಲ್ಲಿ ಸುಮಾರು 1 ಸಾವಿರ ಮೌಲ್ಯದ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆ ಹಾನಗಲ್ಲು ಬಾಣೆ ಗ್ರಾಮದ ನಿವಾಸಿ ಯೋಗೇಶ್ ಎಂಬಾತನನ್ನು ಪೊಲೀಸ್ ಠಾಣಾ ಧಿಕಾರಿ ಶಿವಣ್ಣ ವಶಕ್ಕೆ ಪಡೆದಿದ್ದಾರೆ.ಸೋಮವಾರಪೇಟೆ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.