ಗೋಣಿಕೊಪ್ಪಲು, ಅ. 17: ಚಿಕ್ಕಮಂಡೂರು ಗ್ರಾಮದಲ್ಲಿ ಚಿರತೆ ಹಾವಳಿ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಳೆದೊಂದು ತಿಂಗಳಿನಿಂದ ಚಿರತೆ ಗ್ರಾಮದ ಸಮೀಪವಿರುವ ದೇವರಕಾಡುವಿನಲ್ಲಿ ಸೇರಿಕೊಂಡು ರಾತ್ರಿ ಗ್ರಾಮಕ್ಕೆ ನುಸುಳುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವಣ ನಿರ್ಮಾಣವಾಗಿದೆ.ಈಗಾಗಲೇ ಗ್ರಾಮದಲ್ಲಿ 2 ಮೇಕೆ ಹಾಗೂ ಒಂದಷ್ಟು ಸಾಕು ನಾಯಿಗಳನ್ನು ಚಿರತೆ ಕೊಂದು ತಿಂದಿದೆ. ಇದರಿಂದಾಗಿ ಚಿರತೆಯನ್ನು ಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೋನ್ ಮೂಲಕ ಚಿರತೆ ಹಿಡಿಯಲು ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವದು ಎಂದು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.