ಮಡಿಕೇರಿ, ಅ. 20: ಸರಕಾರಿ ಪದವಿಪೂರ್ವ ಕಾಲೇಜು ನಾಪೋಕ್ಲುವಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಮಡಿಕೇರಿಯ ಅರುಣ್ ಸ್ಟೋರ್ಸ್‍ನ ಮಾಲೀಕ ಅರುಣ್ ಅವರು ಕೊಡುಗೆಯಾಗಿ ನೀಡಿದ ಕ್ಯಾಪ್‍ಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಬಿ.ಎಂ. ಪದ್ಮಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಎ.ಸಿ. ರಾಮಕೃಷ್ಣ ಉತ್ತಮ ದೃಷ್ಟಾಂತಗಳೊಂದಿಗೆ ಎನ್.ಎಸ್.ಎಸ್.ನ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸರೋಜ, ಉಪನ್ಯಾಸಕರು, ಸಿಬ್ಬಂದಿಗಳು ಹಾಜರಿದ್ದರು. ಎನ್.ಎಸ್.ಎಸ್. ಅಧಿಕಾರಿ ಕೆ.ಟಿ. ಕೃಪಾ ಸ್ವಾಗತಿಸಿ, ನಿರೂಪಿಸಿದರು. ಬಿ.ಎಂ. ನಳಂದ ವಂದಿಸಿದರು.