ಸುಂಟಿಕೊಪ್ಪ, ಅ. 20: ಕುಡಿದು ಬರುವ ಯರಿಗೂ ಕುಟುಂಬದಲ್ಲಿ ಸಮಾಜದಲ್ಲಿ ಬೆಲೆ ಸಿಗುವದಿಲ್ಲ. ಕುಡಿತಕ್ಕೆ ದಾಸರಾದ 54 ಮಂದಿ ಮದ್ಯತ್ಯಜಿಸಿ ಹೊಸ ಜೀವನಕ್ಕೆ ಸೇರ್ಪಡೆಗೊಂಡಿರುವದರಿಂದ ಕಾವೇರಿ ಸಂಕ್ರಮಣದಂದು ಉತ್ತಮ ಸಂದೇಶ ರವಾನೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಸೀತಾರಾಂ ಶೆಟ್ಟಿ ಹೇಳಿದರು.
ಇಲ್ಲಿನ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ತಾ. 10 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ, ಮದ್ಯವಜ್ರ್ಯನ ಶಿಬಿರ ವ್ಯವಸ್ಥಾಪನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 1137ನೇ ಮದ್ಯವಜ್ರ್ಯನ ಶಿಬಿರದ ಸಮರೋಪ ಸಮಾರಂಭದಲ್ಲಿ ಮಾತನಾಡಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಮಾತನಾಡಿ, ಕುಡಿತದಿಂದ ನೈತಿಕ ಅಧಃಪತನಕ್ಕೆ ತಲುಪುತ್ತೇವೆ. ಪಾಶ್ಚಿಮಾತ್ಯ ದೇಶದಿಂದ ಬಳುವಳಿಯಾಗಿ ಮದ್ಯ ಭಾರತ ದೇಶಕ್ಕೆ ಬೇಡವಾಗಿದ್ದರೂ ಪರಿಚಯಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಮದ್ಯ ಸೇವನೆಯಿಂದ ವ್ಯಕ್ತಿಯ ಮಾನಸಿಕ ಸಮತೋಲನ, ಕೊಲೆ, ದರೋಡೆ, ರೇಪ್, ವಾಹನ ಅವಘಡಕ್ಕೆ ಕಾರಣವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮದ್ಯವಜ್ರ್ಯನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಆರ್. ಕೃಷ್ಣಭಟ್ ವಹಿಸಿ ಹಿತವಚನ ನೀಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, 7ನೇ ಹೊಸಕೋಟೆ ನಿವಾಸಿ ಕಾಫಿ ಬೆಳೆಗಾರ ದಾಸಂಡ ರಮೇಶ್, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಮಾತನಾಡಿದರು.
ವೇದಿಕೆಯಲ್ಲಿ ಸುಂಟಿಕೊಪ್ಪ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ವೈದ್ಯಾಧಿಕಾರಿ ಡಾ. ಪ್ರಾಣೇಶ್, ಶಿಬಿರಾಧಿಕಾರಿ ಭಾಸ್ಕರ, ನಾಕೂರು-ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಧು ನಾಗಪ್ಪ, ಯೋಗ ಶಿಕ್ಷಕ ಸತೀಶ್, ಕಾಫಿ ಬೆಳೆಗಾರರಾದ ನಿಲ್ಲಮ್ಮ ಪೆಮ್ಮಯ್ಯ, ಮದ್ಯವಜ್ರ್ಯನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಾದ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಬಿ.ಎಂ. ಸುರೇಶ್, ಕಂಬಿಬಾಣೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಶಶಿಕಾಂತ ರೈ, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷರು ಕೆ.ಎಸ್ ವಿನೋದ್, ಕಾರ್ಯದರ್ಶಿ ಬಿ.ಎ. ವಸಂತ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಮ್ಮಯ್ಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಯೋಜನಾಧಿಕಾರಿ ಪ್ರಕಾಶ್ ವೈ ಸ್ವಾಗತಿಸಿ, ಮೇಲ್ವಿಚಾರಕ ಕೆ. ರಮೇಶ್ ನಿರೂಪಿಸಿ, ಮೇಲ್ವಿಚಾರಕಿ ಕೆ. ಸರಸ್ವತಿ ವಂದಿಸಿದರು.