ವೀರಾಜಪೇಟೆ, ಅ. 19: ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜನಾಂಗದ ಕ್ರೋಡನಾಡ್ ಕೊಡವಮಕ್ಕ ಎಂಬ ಸಂಘಟನೆಗೆ ಪುರಭವನದಲ್ಲಿ ದುಡಿಕೊಟ್ಟುವದರ ಮೂಲಕ ಚಾಲನೆ ನೀಡಲಾಯಿತು. ನಿವೃತ್ತ ಸಹಾಯಕ ಸರ್ವೆ ಅಧಿಕಾರಿ ಅಜ್ಜಿಕುಟ್ಟಿರ ಭೀಮಯ್ಯ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಾಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಕೊಡವರ ಶಕ್ತಿ ಸಾಮಥ್ರ್ಯ ಏನು ಎಂಬದು ತಿಳಿಯುತ್ತಿಲ್ಲ. ಜಿಲ್ಲೆಯ ಹೊರಗಿನವರು ಅದನ್ನು ಅರಿತುಕೊಂಡಿದ್ದಾರೆ. ಕೊಡವ ಜನಾಂಗ ನಿಯತ್ತಿಗೆ ಹೆಸರುವಾಸಿ ಯಾಗಿದ್ದು ಹಿಂದಿನ ರಾಜರ ಕಾಲದಿಂದಲೂ ಇದು ನಡೆದು ಬಂದಿದೆ. ಇದು ಇಂದಿನ ರಾಜಕಾರಣ ದಲ್ಲೂ ಬಳಕೆಯಾಗುತ್ತಿರುವದು ವಿಶೇಷತೆ ಎನಿಸಿದೆ. ತಾಯಿ ಭಾಷೆಯಾದ ಕೊಡವ ಭಾಷೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ ಎಂದರು.
ಇನ್ನೋರ್ವ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ ಕೊಡವ ಭಾಷೆ, ಸಂಸ್ಕøತಿ, ಪದ್ಧತಿ. ಪರಂಪರೆಯನ್ನು ಉಳಿಸಿ ಬೆಳೆಸಲು ಹತ್ತು ಜನರು ಕೈಜೋಡಿಸಿದರೆ ಇಂದಿನ ಯುವಕರಿಂದಲೇ ಕೊಡವರ ಗತ್ತು, ಗಾಂಭೀರ್ಯತೆ ಉಳಿಯಲು ಸಾಧ್ಯ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ ಕೊಡವ ಸಂಘಟನೆಗಳು ಯಾವದೇ ಜನಾಂಗದ ವಿರುದ್ಧ ಕಾರ್ಯ ನಿರ್ವಹಿಸುವಂತಿರಬಾರದು. ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದ್ದು ಅದನ್ನು ಸರಿ ದಾರಿಗೆ ತರುವ ಕೆಲಸ ಕೊಡವ ಸಂಘಟನೆಗಳಿಂದ ಆಗಬೇಕಿದೆ ಎಂದು ಹೇಳಿದರು.
ಕ್ರೋಡನಾಡ್ ಕೊಡವ ಮಕ್ಕಡ ಸಂಘಟನೆಯ ಅಧ್ಯಕ್ಷ ಕೇಚಂಡ ರಂಜನ್ ಮಾತನಾಡಿ ಕೊಡವ ಭಾಷೆ ಹಾಗೂ ಪದ್ಧತಿ ಪರಂಪರೆಗಳು ಮರೆಯಾಗುತ್ತಿರುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಸಂಘಟಿಸುವ ಕೆಲಸ ನಮ್ಮ ಸಂಘಟನೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪೊನ್ನೋಲ್‍ತಂಡ ರೀಮಾ ಸ್ವಾಗತಿಸಿದರು, ಕೇಲೆಟಿರ ಪವಿತ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು. ಕೇಚಂಡ ಡೋನಿ ಬೋಪಣ್ಣ ವಂದಿಸಿದರು.