ಗೋಣಿಕೊಪ್ಪಲು, ಅ. 19 : ಸರ್ಕಾರ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪೊನ್ನಂಪೇಟೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಕಚೇರಿ ಎದುರು ತಾ. 23 ರಂದು ಪ್ರತಿಭಟನೆ ನಡೆಸಲಾಗುವದು ಎಂದು ಆದಿವಾಸಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.
ನಿವೇಶನಕ್ಕೆ ಆಗ್ರಹಿಸಿ ಕಳೆದ ಮೂರು ವರ್ಷಗಳಿಂದಲೂ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರ ಇನ್ನೂ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗುತ್ತಿಲ್ಲ. ಸೂಕ್ತ ದಾಖಲಾತಿ ನೀಡಿರುವ ಅರ್ಜಿದಾರರನ್ನೂ ಕೂಡ ಪರಿಗಣಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಆದಿವಾಸಿ ಮಹಾಸಭಾ ಹಾಗೂ ಭಾರತ ಕಮ್ಯೂನಿಷ್ಟ್ ಪಾರ್ಟಿ ವತಿಯಿಂದ ಅಂದು 10.30 ಕ್ಕೆ ಕಾನೂರು ರಸ್ತೆ ಜಂಕ್ಷನ್ನಿಂದ ಪಟ್ಟಣದ ಮೂಲಕ ಇಒ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿz ಎಂದರು. ಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಕೆ.ವಿ. ಸುನಿಲ್, ಅದಿವಾಸಿ ಮಹಾಸಭಾ ಸದಸ್ಯರುಗಳಾದ ಬಿ.ಸಿ. ವಿಜು, ಪಿ.ಎಸ್. ಮುತ್ತ ಹಾಗೂ ಬಸವ ಉಪಸ್ತಿತರಿದ್ದರು.