ಮಡಿಕೇರಿ, ಅ. 20: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಅಂಗವಿಕಲ ಫಲಾನುಭವಿಗಳಿಗೆ 2017-18 ನೇ ಸಾಲಿಗೆ ಪಂಚಾಯಿತಿ ನೀಡಿದ ಶೇ. 3 ರ ಕಾಮಗಾರಿಯಲ್ಲಿ ಸಾವಿರ ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್‍ನ್ನು ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ ಹಾಗೂ ಪ್ರೇಮ್ ಕುಮಾರ್ ಅರ್ಹ ಫಲಾನುಭವಿಗಳಾದ ಯಶೋಧ, ಅಕ್ಕಮ್ಮ ಮತ್ತು ಫ್ರಾನ್ಸಿಸ್ ಡಿಸೋಜ ಅವರಿಗೆ ವಿತರಿಸಿದರು.
ಕಳೆದ ಬಾರಿ ಮಹಾದೇವಿ, ಧರ್ಮು, ವಿದ್ಯಾ ಹಾಗೂ ಗಣೇಶ್ ಅವರಿಗೆ ಟ್ಯಾಂಕ್ ವಿತರಿಸಲಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಲಾಗುತ್ತಿದೆ ಎಂದು ಜಾನ್ಸನ್ ಪಿಂಟೋ ಇದೇ ಸಂದರ್ಭ ತಿಳಿಸಿದರು.
ಸ್ಥಳೀಯ ಗ್ರಾಮಸ್ಥರಾದ ಶಶಿಕುಮಾರ್, ಯಶೋಧ, ನಾಗರತ್ನ, ಹೆಚ್.ಆರ್. ರವಿ, ಬಿ.ಎನ್. ಮೊಣ್ಣಪ್ಪ, ರತ್ನಾವತಿ, ವಿಕ್ಟರ್ ಡಿಸೋಜ, ಲಾಲ ಹಾಗೂ ಧರ್ಮರಾಜ್ ಹಾಜರಿದ್ದರು.