ಮಡಿಕೇರಿ, ಅ.19 : ದಕ್ಷಿಣದ ಗಂಗೆ ಕಾವೇರಿ ನದಿಯ ಸ್ವಚ್ಛತೆ ಮತ್ತು ಪಾವಿತ್ರ್ಯತೆಯ ಸಂರಕ್ಷಣೆÉಯ ಹಿನ್ನೆಯಲ್ಲಿ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಜನಜಾಗೃತಿ ತೀರ್ಥಯಾತ್ರೆಗೆ ಈ ಬಾರಿ ತಾ.22 ರಂದು ತಲಕಾವೇರಿಯಲ್ಲಿ ಚಾಲನೆ ದೊರೆಯಲಿದೆ. ಅಖಿಲ ಭಾರತೀಯ ಸನ್ಯಾಸಿ ಸಂಘ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನದ ವತಿಯಿಂದ ತಲಕಾವೇರಿಯಿಂದ ಪÀÇಂಪ್ಹಾರ್ವರೆಗೆ ಯಾತ್ರೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತೀರ್ಥಯಾತ್ರೆÉಯಿಂದ ಕಾವೇರಿ ನದಿಯ ಸ್ವಚ್ಛತೆ ಮತ್ತು ಸಂರಕ್ಷಣೆಯ ಅರಿವು ಜನರಲ್ಲಿ ಮೂಡಲಾರಂಭಿಸಿದೆ. ಈ ಬಾರಿಯ ತೀರ್ಥಯಾತ್ರೆಯಲ್ಲಿ 50 ಕ್ಕೂ ಹೆಚ್ಚಿನ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾವೇರಿ ಜಾಗೃತಿ ತೀರ್ಥಯಾತ್ರೆಯಿಂದಾಗಿ ‘ನಮ್ಮ ಕಸ ನಮ್ಮದು’ , ಅದನ್ನು ಇತರರು ಸ್ವಚ್ಛಮಾಡುವ ಬದಲಾಗಿ, ನಾವೇ ಅದಕ್ಕೆ ಜವಾಬ್ದಾರರು. ಪರಿಸರಕ್ಕೆ ಕಸವನ್ನು ಒಗೆದು ಅಶುಚಿತ್ವಕ್ಕೆ ಕಾರಣರಾಗಬಾರದೆನ್ನುವ ಚಿಂತನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ತಾ.22 ರಂದು ಬೆಳಿಗ್ಗೆ 8.30 ಗಂಟೆಗೆ ತಲಕಾವೇರಿಯಲ್ಲಿ ತೀರ್ಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಕಾವೇರಿ ನದಿ ಜಾಗೃತಿ ಯಾತ್ರೆಯ ಸಂಯೋಜಕ ವೇದಬ್ರಹ್ಮ ಡಾ| ಭಾನುಪ್ರಕಾಶ್ ಶರ್ಮ, ಸಮಿತಿ ಸಂಚಾಲಕ ಗಣೇಶ್ ಸ್ವರೂಪಾನಂದಗಿರಿ ಸ್ವಾಮೀಜಿ, ತಮಿಳುನಾಡು ಪ್ರಾಂತದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಯಾತ್ರೆಯಲ್ಲಿ ಕಾವೇರಿ ಮಾತೆಯನ್ನು ಹೊತ್ತ ಜಾಗೃತಿ ರಥ 3 ವಾರಗಳ ಕಾಲ ಕಾವೇರಿ ನದಿ ತಟದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.
ಜಾಗೃತಿ ಯಾತ್ರೆಯ ಮೂಲಕ ಕೊಂಡೊಯ್ಯುವ ಕಾವೇರಿ ತೀರ್ಥವನ್ನು ನವೆಂಬರ್ 13 ರಂದು ತಮಿಳುನಾಡಿನ ಪೂಂಪ್ಹಾರ್ನಲ್ಲಿ ಬಂಗಾಳಕೊಲ್ಲಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಈ ಸಂದರ್ಭ ಕಾವೇರಿ ನದಿ ಸಂರಕ್ಷಣೆ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಂಡು ರಾಜ್ಯ ಮತ್ತು ಕೆÉೀಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನವು ಕರ್ನಾಟಕ ಮತ್ತು ತಮಿಳುನಾಡಿನ 5 ಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಕಾವೇರಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ತಲಕಾವೇರಿಯಿಂದ ಪೂಂಪ್ಹಾರ್ ತನಕ ಸ್ವಚ್ಛ ಕಾವೇರಿಗಾಗಿ ‘ಕಾವೇರಿ ಕುಟುಂಬ’ ಕಾರ್ಯಕ್ರಮವನ್ನು ರೂಪಿಸಿದೆ. ಈ ಕಾವೇರಿ ಕುಟುಂಬ ಮುಂದಿನ 3 ವರ್ಷಗಳ ಅವಧಿಯಲ್ಲಿ ಎರಡು ರಾಜ್ಯಗಳಲ್ಲಿ 2 ಕೋಟಿ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಗುರಿ ಹೊಂದಿದೆ. ಇದರಲ್ಲಿ 1 ಲಕ್ಷ ಸದಸ್ಯತ್ವವನ್ನು ಕೊಡಗಿನಲ್ಲೆ ಮಾಡುವ ಉದ್ದೇಶವಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದ ಒಳಗಾಗಿ ಕಾವೇರಿ ನದಿ ತಟಗಳಲ್ಲಿನ ಸಂಘ ಸಂಸ್ಥೆಗಳನ್ನು ಗುರುತಿಸಿ, ನದಿ ಸಂರಕ್ಷಣೆ ಸಂಬಂಧ ಜನ ಜಾಗೃತಿ ಕಾರ್ಯಕ್ರಮ ರೂಪಿಸಲು ಸಮಾನ ಮನಸ್ಕರ ಸಭೆÉಯನ್ನು ಆಯೋಜಿಸಲಾಗುವದೆಂದು ಚಂದ್ರಮೋಹನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್.ಸೊಮಶೇಖರ್ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಕೆ.ಆರ್. ಶಿವಾನಂದನ್ ಉಪಸ್ಥಿತರಿದ್ದರು.
ತೀರ್ಥಯಾತ್ರೆ ಮಾರ್ಗ
ಕಾವೇರಿ ಜಾಗೃತಿ ತೀರ್ಥಯಾತ್ರೆ ಅ.22 ರಂದು ತಲಕಾವೇರಿಯಿಂದ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಕಾವೇರಿ ಮಾತೆಗೆ ಅಭಿಷೇಕ, ಕಳಸ ಭರ್ತಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವದು.
ನಂತರ ತಲಕಾವೇರಿಯಿಂದ ಹೊರಟು ಭಾಗಮಂಡಲದಲ್ಲಿ ಕಾವೇರಿ ಆರತಿ ಸಮರ್ಪಿಸಲಾಗುವದು. ಅಲ್ಲಿಂದ ಮುಂದುವರಿಯುವ ಯಾತ್ರೆ, ಪಾಲೂರು ದೇವಸ್ಥಾನ ಬಲಮುರಿ, ಮೂರ್ನಾಡು, ವೀರಾಜಪೇಟೆಗೆ ಆಗಮಿಸಿ, ಚಿಕ್ಕಪೇಟೆಯಿಂದ ಶೋಭಾಯಾತ್ರೆ ನಡೆಸಲಾಗುವದು. ಅರಮೇರಿ ಕಳಂಚೇರಿ ಮಠಕ್ಕೆ ಆಗಮಿಸಿ ಬಳಿಕ ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ತಾ.23 ರಂದು ಕಾವಾಡಿ ದೇವಸ್ಥಾನದಿಂದ ನಿರ್ಗಮಿಸಿ ಅಮ್ಮತ್ತಿಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವದು. ಗುಹ್ಯ ಅಗಸ್ತ್ಯೇಶ್ವರದಲ್ಲಿ ಕಾವೇರಿ ಆರತಿ ಅರ್ಪಿಸಿ, ಸಿದ್ದಾಪುರ, ನೆಲ್ಯಹುದಿಕೇರಿ, ದುಬಾರೆ, ಕುಶಾಲನಗರ ನಂತರ ಕಣಿವೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಆರತಿ ಪ್ರಸಾದ ವಿನಿಯೋಗ ನಡೆಯಲಿದೆ. ತಾ.24 ರಂದು ಕೊಡಗಿನಿಂದ ನಿರ್ಗಮಿಸಲಿದೆ.