ಗೋಣಿಕೊಪ್ಪಲು, ಅ. 20: ಹಾಕಿ ಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಷನ್ ಹಾಕಿ ಲೀಗ್ನ 2 ದಿನದ ಪಂದ್ಯಾಟದಲ್ಲಿ 4 ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದ್ದು, 2 ಪಂದ್ಯ ಫಲಿತಾಂಶ ನೀಡಿದೆ.
ಹಾತೂರು ಹಾಗೂ ಟವರ್ಸ್, ಮೂರ್ನಾಡು ಎಂಆರ್ಎಫ್ ಹಾಗೂ ಬೇರಳಿನಾಡ್ ಯುಎಸ್ಸಿ, ಸೋಮವಾರಪೇಟೆ ಡಾಲ್ಫಿನ್ಸ್ ಹಾಗೂ ಬಿಬಿಸಿ ಮತ್ತು ಅಮ್ಮತ್ತಿ ಈಗಲ್ಸ್ ಹಾಗೂ ಪೊದ್ದ್ಮಾನಿ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾ ಸಾಧಿಸಿತು. ಉಳಿದಂತೆ ಕೋಣನಕಟ್ಟೆ ಇಲೆವೆನ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳು ಗೆಲುವು ಸಾಧಿಸಿವೆ.
ಹಾತೂರು ಹಾಗೂ ಟವರ್ಸ್ ನಡುವಿನ ಪಂದ್ಯ 3-3ರಲ್ಲಿ ಡ್ರಾ ಫಲಿತಾಂಶ ನೀಡಿತು. ಹಾತೂರು ಪರ 16ನೇ ನಿಮಿಷದಲ್ಲಿ ಗಣಪತಿ, 53ನೇ ನಿಮಿಷದಲ್ಲಿ ಸೋಮಣ್ಣ, 59ರಲ್ಲಿ ಶಾನ್, ಟವರ್ಸ್ ಪರ 4ರಲ್ಲಿ ಶಾಮ್ಸ್ ಕುಕ್ಕು, 41 ರಲ್ಲಿ ಬೋಪಣ್ಣ, 57 ರಲ್ಲಿ ಸುದೀಶ್ ಗೋಲು ಹೊಡೆದರು.
ಮೂರ್ನಾಡು ಎಂಆರ್ಎಫ್ ತಂಡವು ಬೇರಳಿನಾಡ್ ಯುಎಸ್ಸಿ ಸೀನಿಯರ್ ತಂಡದೊಂದಿಗೆ 2-2 ಗೋಲುಗಳ ಡ್ರಾ ಸಾಧಿಸಿತು. ಎಂಆರ್ಎಫ್ ಪರ 12 ರಲ್ಲಿ ಕಾರ್ಯಪ್ಪ, 39 ರಲ್ಲಿ ತಮ್ಸಾಯ್, ಬೇರಳಿನಾಡ್ ಪರ 43 ರಲ್ಲಿ ಆಕಾಶ್, 58ರಲ್ಲಿ ಬೋಪಣ್ಣ ಗೋಲು ಹೊಡೆದರು.
ಸೋಮವಾರಪೇಟೆ ಡಾಲ್ಫ್ಪಿನ್ಸ್ ಹಾಗೂ ಬಿಬಿಸಿ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾ ಫಲಿತಾಂಶ ನೀಡಿತು. ಡಾಲ್ಫಿನ್ಸ್ ಪರ 12 ನೇ ನಿಮಿಷದಲ್ಲಿ ಪ್ರಸನ್ನ, 25 ರಲ್ಲಿ ರಾಯ್, ಬಿಬಿಸಿ ಪರ 22 ರಲ್ಲಿ ಸಂದೇಶ್, 30 ರಲ್ಲಿ ವಿಘ್ನೇಶ್ ಗೋಲು ಹೊಡೆದರು.
ಅಮ್ಮತ್ತಿ ಈಗಲ್ಸ್ ಹಾಗೂ ಪೊದ್ದ್ಮಾನಿ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ರೋಚಕ ಟೈನಲ್ಲಿ ಅಂತ್ಯವಾಯಿತು. ಈಗಲ್ಸ್ ಪರ 3 ರಲ್ಲಿ ಗಣಪತಿ, 19 ರಲ್ಲಿ ಅವಿನಾಶ್, ಪೊದ್ದ್ಮಾನಿ ಪರ 27 ರಲ್ಲಿ ಚೆಂಗಪ್ಪ, 54 ರಲ್ಲಿ ಸುಬ್ಬಯ್ಯ ಗೋಲು ಹೊಡೆದರು.
ಕೋಣನಕಟ್ಟೆ ಇಲೆವೆನ್ ತಂಡವು ಚಾರ್ಮರ್ಸ್ ವಿರುದ್ಧ 3-1 ಗೋಲುಗಳ ಅಂತರದ ಗೆಲುವು ಪಡೆಯಿತು. ಚಾರ್ಮರ್ಸ್ ಪರ 4ನೇ ನಿಮಿಷದಲ್ಲಿ ಚೇತನ್ ದೇವಯ್ಯ 1 ಗೋಲು, ಕೋಣನಕಟ್ಟೆ ಪರ 34 ರಲ್ಲಿ ಅಯ್ಯಪ್ಪ, 38 ಹಾಗೂ 54 ರಲ್ಲಿ ಕುಟ್ಟಪ್ಪ 2 ಗೋಲು ಹೊಡೆದರು.
ಪೊನ್ನಂಪೇಟೆ ಸ್ಫೋಟ್ರ್ಸ್ ಹಾಸ್ಟೆಲ್ ತಂಡವು ಕಾಕೋಟು ಪರಂಬು ತಂಡವನ್ನು 6-2 ಗೋಲುಗಳ ಮೂಲಕ ಸೋಲಿಸಿತು. ಪೊನ್ನಂಪೇಟೆ ಪರ 15, 39, 42, 59ನೇ ನಿಮಿಷದಲ್ಲಿ ಗ್ಯಾನ್ ಗಣಪತಿ 4 ಗೋಲು ಹೊಡೆದರು. 29 ರಲ್ಲಿ ಪೂವಣ್ಣ, 44 ರಲ್ಲಿ ಗೌತಂ, ಕಾಕೋಟುಪರಂಬು ಪರ 30 ರಲ್ಲಿ ಅಜಿತ್, 36 ರಲ್ಲಿ ನಿತಿನ್ ಗೋಲು ಹೊಡೆದರು.