ಮಡಿಕೇರಿ, ಅ. 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಪ್ರಯುಕ್ತ ನೋವು ನಿವಾರಣಾ ವಿಶೇಷ ಚಿಕಿತ್ಸಾ ಸಪ್ತಾಹ ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯುವದು ಅಗತ್ಯ ಎಂದು ನುಡಿದರು.
ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಮಾತನಾಡಿ, ಜಿಲ್ಲಾ ಆರ್ಯುವೇದ ಆಸ್ಪತ್ರೆಯಲ್ಲಿ ತಾ. 23 ರವರೆಗೆ ನೋವು ನಿವಾರಣಾ ಆಯುರ್ವೇದ ಶಿಬಿರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಅಶ್ವಿನಿ ಆಸ್ಪತ್ರೆಯ ಡಾ. ಕುಲಕರ್ಣಿ ಇತರರು ಪಾಲ್ಗೊಂಡಿದ್ದರು. ಮಂಡಿ, ಕತ್ತು, ಬೆನ್ನು, ಸೊಂಟ, ಭುಜ, ತಲೆ ಹೀಗೆ ವಿವಿಧ ರೀತಿಯ ನೋವುಗಳಿಗೆ ತಜ್ಞ ಆರ್ಯುವೇದ ವೈದ್ಯರಿಂದ ತಪಾಸಣೆ ನಡೆಸಿ ಉಚಿತ ಔಷಧ ವಿತರಣೆ ಮಾಡಲಾಯಿತು. ಹಲವು ಮಂದಿ ನೋವು ನಿವಾರಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.