ಗೋಣಿಕೊಪ್ಪಲು, ಅ. 20: ಇಲ್ಲಿನ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣ ದಲ್ಲಿ ಜಿಲ್ಲಾ ಫ್ಲೋರ್‍ಬಾಲ್ ಅಸೋಸಿ ಯೇಷನ್, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 3 ನೇ ವರ್ಷದ ರಾಜ್ಯಮಟ್ಟದ ಪದವಿಪೂರ್ವ ಬಾಲಕ, ಬಾಲಕಿಯರ ಫ್ಲೋರ್‍ಬಾಲ್ ಕ್ರೀಡಾಕೂಟಕ್ಕೆ ತಾ. 21 ರಂದು (ಇಂದು) ಚಾಲನೆ ದೊರೆಯಲಿದೆ.

ಬೆ. 10 ಗಂಟೆಗೆ ಶಾಸಕ ಕೆ. ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಫ್ಲೋರ್‍ಬಾಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ರಿಜು ಜಾನಿ, ಜಿಲ್ಲಾಧ್ಯಕ್ಷ ಮಿನ್ನಂಡ ಜೋಯಪ್ಪ, ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ. ಸಿ. ಗಣಪತಿ, ನಿರ್ದೇಶಕ ಕೆ. ಪಿ. ಬೋಪಣ್ಣ,

ಜಿ. ಪಂ. ಸದಸ್ಯ ಸಿ. ಕೆ. ಬೋಪಣ್ಣ, ಪಿಯು ಬೋರ್ಡ್ ಉಪನಿರ್ದೇಶಕ ಟಿ. ಸ್ವಾಮಿ, ವೀಕ್ಷಕ ಹಜಾರೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಸಪಿನ್ಸ, ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಸಲಹೆಗರ ಬುಟ್ಟಿಯಂಡ ಚೆಂಗಪ್ಪ ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟದಲ್ಲಿ 28 ತಂಡಗಳು ಪಾಲ್ಗೊಳ್ಳುತ್ತಿದ್ದು, ಬಾಲಕಿಯರಲ್ಲಿ ಮೈಸೂರು, ಮಂಗಳೂರು ನಾರ್ಥ್, ದಕ್ಷಿಣ ಕನ್ನಡ, ಬೆಂಗಳೂರು ಸೌತ್, ಮಂಡ್ಯ, ಬಾಗಲಕೋಟೆ, ಬೆಳಗಾಂ, ಹಾಸನ, ದಾರವಾಡ, ಕೊಡಗು, ಬಾಲಕರಲ್ಲಿ ಕೊಡಗು, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಉಡುಪಿ, ಬೆಳಗಾಂ, ರಾಮನಗರ, ಗದಗ್, ಮೈಸೂರು, ಬೆಂಗಳೂರು ನಾರ್ತ್, ಬೀದರ್, ಬಾಗಲಕೋಟೆ, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಸೌತ್, ತುಮಕೂರು, ಧಾರವಾಡ ಹಾಗೂ ಮಂಡ್ಯ ತಂಡಗಳು ಸೆಣೆಸಾಟ ನಡೆಸಲಿವೆ.