ಮಡಿಕೇರಿ, ಅ. 19: ಶ್ರೀ ಕ್ಷೇತ್ರ ತಲಕಾವೇರಿ ಸನ್ನಿಧಿಯಲ್ಲಿ ಪವಿತ್ರ ತೀರ್ಥೋದ್ಭವ ಬಳಿಕ ಮರುದಿನ ಬೆಳಿಗ್ಗೆ ಮನೆ ಮನೆಗಳಲ್ಲಿ ಕಾವೇರಿ ಮಾತೆಯನ್ನು ಕಣಿಪೂಜೆಯ ಮೂಲಕ ಆರಾಧಿಸುವದು ಇಲ್ಲಿನ ಸಂಸ್ಕøತಿ. ಮಾತೆ ಕಾವೇರಿಯನ್ನು ಭಕ್ತರು ಅವರವರ ಆಸಕ್ತಿ, ಭಕ್ತಿಯ ಅನುಸಾರ ಹೂವು, ಆಭರಣದೊಂದಿಗೆ ಪ್ರತಿರೂಪ ಸೃಷ್ಟಿಸಿ ಪೂಜಿಸುತ್ತಾರೆ. ಬಳಿಕ ಐನ್ಮನೆ ಕೈಮಡ, ಕಾರೋಣ ತೆರೆಗೆ ತೆರಳಿ ಪೂರ್ವಿಕರಿಗೆ ನಮನ ಸಲ್ಲಿಸುವರೊಂದಿಗೆ ಕಿರಿಯರು, ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ತಾ. 18 ರಂದು ತೀರ್ಥಪೂಜೆಯೊಂದಿಗೆ ಮಾತೆಯ ಭಕ್ತರು ಕಣಿ ಪೂಜೆಯೊಂದಿಗೆ ಕುಲದೇವಿಯನ್ನು ಆರಾಧಿಸಿದರು.