ಶನಿವಾರಸಂತೆ, ಅ. 19: ವಿಯೆಟ್ನಾಂ ಮತ್ತಿತರ ದೇಶಗಳಿಂದ ಕಾಳುಮೆಣಸು ಆಮದು ಮಾಡಿಕೊಳ್ಳು ತ್ತಿರುವದನ್ನು ಹಾಗೂ ಕರ್ನಾಟಕದ ಆರ್‍ಎಂಸಿಯಲ್ಲಿ ಕಾಳುಮೆಣಸಿಗೆ ವಿಧಿಸುತ್ತಿರುವ ಸುಂಕವನ್ನು ವಿರೋಧಿಸಿ ಶನಿವಾರಸಂತೆ ಹೋಬಳಿ ನಮ್ಮ ಬೆಳೆಗಾರರ ಸ್ವಸಹಾಯ ಸಂಘ ಹಾಗೂ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಗುಡುಗಳಲೆ ವೃತ್ತದಿಂದ ಆರಂಭವಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು. ಈ ಸಂದರ್ಭ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಮಾತನಾಡಿ, ಪರಿಸರ ಸ್ನೇಹಿ ಮಾದರಿಯಲ್ಲಿ ಬೆಳೆಯುತ್ತಿರುವ ಉತ್ಕøಷ್ಟ ಗುಣಮಟ್ಟದ ಆರೋಗ್ಯಕರ ಗುಣವುಳ್ಳ ಹಾಗೂ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿರುವ ಕಾಳುಮೆಣಸಿನ ಬೇಡಿಕೆಯಲ್ಲಿ ಕುಂಠಿತವಾಗಿ ಬೆಳೆಗಾರರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳು ಹಾಗೂ ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಪರಿಹಾರಕ್ಕೆ ಸರ್ಕಾರ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾ ಕಾರರು ನಾಡ ಕಚೇರಿಗೆ ತೆರಳಿ ಕಂದಾಯ ಅಧಿಕಾರಿ ಮಧು ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವಿದೇಶಗಳಿಂದ ಆಮದಾ ಗುತ್ತಿರುವ ಕಳಪೆ ಗುಣಮಟ್ಟದ ಕಾಳು ಮೆಣಸು ಭಾರತದಿಂದ ಪುನಹ ವಿದೇಶಗಳಿಗೆ ರಫ್ತಾಗುತ್ತಿದ್ದು, ಬೆಲೆ ಮತ್ತು ಬೇಡಿಕೆ ಇಳಿಮುಖಗೊಂಡಿದೆ. ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕ ವರ್ಗಕ್ಕೂ ಸಮಸ್ಯೆಯಾಗಿದೆ. ವಿಯೆಟ್ನಾಂ ಕಾಳು ಮೆಣಸು ಕಾರ್‍ಂಡೈಜಂನಿಂದ ಕೂಡಿದ್ದು, ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಕಾರಣವಾಗಲಿದೆ. ಬೆಲೆ ಕುಸಿತದಿಂದ ಕಾಳು ಮೆಣಸು ಬೆಳೆಗಾರರ ಉತ್ಪಾದನೆ ಕುಂಠಿತಗೊಳ್ಳಲಿದೆ. ಕರ್ನಾಟಕ ಆರ್‍ಎಂಸಿಯಲ್ಲಿ ವಿಧಿಸುತ್ತಿರುವ ಸುಂಕ ಬೆಳೆಗಾರರಿಗೆ ಹೊರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸರ್ಕಾರ ಕಾಳುಮೆಣಸು ಆಮದ ನ್ನು ಸಂಪೂರ್ಣ ನಿಷೇಧಿಸಬೇಕು. ಸುಂಕವನ್ನು ರದ್ದುಗೊಳಿಸಬೇಕು, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿ ದ್ದಾರೆ. ಪ್ರತಿಭಟನೆಯಲ್ಲಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಸಿ. ಶರತ್, ಶೇಖರ್, ಕಾರ್ಯದರ್ಶಿ ಮಲ್ಲೇಗೌಡ, ರೋಟರಿ ಸಂಸ್ಥೆ ಅಧ್ಯಕ್ಷ ವಸಂತ್ ಕುಮಾರ್, ಬೆಳೆಗಾರರಾದ ದಿವಾಕರ್, ರಂಗಸ್ವಾಮಿ, ಅರವಿಂದ್, ಮೋಹನ್‍ಕುಮಾರ್, ದೊಡ್ಡಪ್ಪ, ಮಹಮ್ಮದ್ ಗೌಸ್, ಪುಟ್ಟಸ್ವಾಮಿ, ಪ್ರದೀಪ್, ಚಂದ್ರೇಗೌಡ, ಮಹಮ್ಮದ್ ಪಾಶ, ಹೂವಯ್ಯ, ಧರ್ಮಪ್ಪ, ವಿರೂಪಾಕ್ಷ, ಮಹೇಶ್, ಅನಿಲ್, ಸುದೀಪ್ ಇನ್ನಿತರರಿದ್ದರು.