ಮಡಿಕೇರಿ, ಅ. 19: ನಗರದ ಗಾಲ್ಫ್ ಮೈದಾನ ಬಳಿ ಹಳೆಯ ಪುಟಾಣಿ ರೈಲು ಜಾಗದಲ್ಲಿ ಕೇಂದ್ರೀಯ ವಿದ್ಯಾಲಯದ ಸುಸಜ್ಜಿತ ಕಟ್ಟಡ ತಲೆಯೆತ್ತುವದರೊಂದಿಗೆ, ಭವಿಷ್ಯದ ಚಿಣ್ಣರ ಸುಂದರ ವಿದ್ಯಾದೇಗುಲವಾಗಿ ರೂಪುಗೊಳ್ಳ ತೊಡಗಿದೆ. ಸುಮಾರು ರೂ. 10 ಕೋಟಿ ವೆಚ್ಚದಲ್ಲಿ ಈ ವಿದ್ಯಾ ಸಂಸ್ಥೆಯು ಈಗಾಗಲೇ ಅಂದಾಜು ರೂ. 4 ಕೋಟಿಯ ಕೆಲಸ ಪೂರೈಸಿರುವದಾಗಿ ತಿಳಿದು ಬಂದಿದೆ.ಹತ್ತು ವರ್ಷಗಳ ಹಿಂದೆ ಇಲ್ಲಿನ ಸರಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಒಂದಿಷ್ಟು ಹಳೆಯ ಖಾಲಿ ಕೊಠಡಿಗಳನ್ನು ಬಳಸಿಕೊಂಡು 2007ರಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಗೊಳ್ಳುವಂತಾಯಿತು. ಹಲವು ತೊಡಕುಗಳ ನಡುವೆಯೇ ಮೂರು ವರ್ಷ ಈ ಆವರಣದಲ್ಲಿ ರೂ. 4 ಕೋಟಿಯ ಕೆಲಸ ಪೂರೈಸಿರುವದಾಗಿ ತಿಳಿದು ಬಂದಿದೆ.

ಹತ್ತು ವರ್ಷಗಳ ಹಿಂದೆ ಇಲ್ಲಿನ ಸರಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಒಂದಿಷ್ಟು ಹಳೆಯ ಖಾಲಿ ಕೊಠಡಿಗಳನ್ನು ಬಳಸಿಕೊಂಡು 2007ರಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಗೊಳ್ಳುವಂತಾಯಿತು. ಹಲವು ತೊಡಕುಗಳ ನಡುವೆಯೇ ಮೂರು ವರ್ಷ ಈ ಆವರಣದಲ್ಲಿ ಶೋಭತೇ’ ಎಂಬ ದ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯ, ಪ್ರಸಕ್ತ ಹಿಂದಿನ ಪುಟಾಣಿ ರೈಲು ನಿವೇಶನ ಸುತ್ತಲಿನ ವಿಶಾಲ 5 ಎಕರೆ ಪ್ರದೇಶದಲ್ಲಿ ಸ್ವಂತ ನೆಲೆ ಕಂಡುಕೊಳ್ಳುವತ್ತ ಕಾರ್ಯ ಸಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ವಿಭಾಗ ಅಧಿಕಾರಿಗಳ ನಿರ್ದೇಶನದಂತೆ ಮಂಗಳೂರಿನ ಗೋವರ್ಧನ್ ಎಂಬವರು ಕಟ್ಟಡದ ಗುತ್ತಿಗೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಈಗಾಗಲೇ ನೆಲ ಅಂತಸ್ತು ಹಾಗೂ ಮೊದಲನೆಯ ಅಂತಸ್ತು ಕಾಮಗಾರಿ ಭರದಿಂದ ಸಾಗಿದೆ. ಕಳೆದ 18.10.2016 ರಲ್ಲಿ ಗೋವರ್ಧನ್ ಏಜೆನ್ಸಿ ಟೆಂಡರ್ ಹೊಂದಿಕೊಂಡಿದ್ದು, ರೂ. 9,98,82,542 ಮೊತ್ತಕ್ಕೆ ಒಡಂಬಡಿಕೆ ಮಾಡಿಕೊಂಡು ಮುಂದಿನ 17.4.2018ಕ್ಕೆ ಕಾಮಗಾರಿಯನ್ನು ಪೂರೈಸಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕಿದೆ. ಒಟ್ಟು ಕಾಮಗಾರಿ ಅವಧಿ 18 ತಿಂಗಳ ಕಾಲಮಿತಿ ಯಾಗಿದೆ.

ಒಟ್ಟಿನಲ್ಲಿ ಸುಂದರ ಪರಿಸರದಲ್ಲಿ ವಿಶಾಲ ಕ್ರೀಡಾಂಗಣದೊಂದಿಗೆ ಸುಸಜ್ಜಿತ ಕೊಠಡಿಗಳು, ಉದ್ಯೋಗಿಗಳ ವಸತಿಗೃಹಗಳು, ಚರಂಡಿ, ನೀರು, ವಿದ್ಯುತ್ ವ್ಯವಸ್ಥೆಯೊಂದಿಗೆ, ಈಗಾಗಲೇ ಮೂಲಭೂತ ವ್ಯವಸ್ಥೆಯ ಪ್ರಥಮ ಹಂತದ ಕೆಲಸ ಚುರುಕಾಗಿ ಮುಂದುವರಿದಿದೆ. ರಾಷ್ಟ್ರೀಯ ವಿಚಾರಧಾರೆಗೆ ಹೆಚ್ಚಿನ ಆದ್ಯತೆ ನೀಡುವ ಕೇಂದ್ರೀಯ ವಿದ್ಯಾಲಯವು ತನ್ನ ದಶಮಾನೋತ್ಸವದ ಬೆನ್ನಲ್ಲೇ ಸ್ವಂತ ನೆಲೆ ಕಂಡುಕೊಳ್ಳುತ್ತಿದೆ.