ಗೋಣಿಕೊಪ್ಪಲು, ಅ. 19: ಕುಂದ ಬೋಡ್ ನಮ್ಮೆಗೆ ಕುಂದ ಬೆಟ್ಟದಲ್ಲಿ ಚಾಲನೆ ನೀಡಲಾಯಿತು. ತೀರ್ಥ ಪೂಜೆ ನಡೆಸುವ ಆಚರಣೆ ಮಾಡಲಾಯಿತು.

ಕಾವೇರಿ ತೀರ್ಥೋದ್ಭವದ ನಂತರದ ದಿನಗಳಲ್ಲಿ ತೀರ್ಥಪೂಜೆ ಯೊಂದಿಗೆ ಚಾಲನೆ ನೀಡಲಾಗುತ್ತದೆ. ಈ ಆಚರಣೆಯು ಕುಂದ ಬೋಡ್ ನಮ್ಮೆ ಎಂದು ಆರಂಭಗೊಳ್ಳುತ್ತದೆ. ಕುಂದ ಬೋಡ್‍ನಲ್ಲಿ ಎರಡು ದಿನಗಳ ಕಾಲ ನಡೆದ ಹಬ್ಬಕ್ಕೆ ತಲಕಾವೇರಿ ಯಿಂದ ತೀರ್ಥವನ್ನು ತಂದು ಪೂಜಿಸಲಾ ಯಿತು. ಗ್ರಾಮದ ಎಲ್ಲಾ ಜನಾಂಗದ ವರು ಸೇರಿ ಬೆಟ್ಟದ ತಪ್ಪಲಿನಲ್ಲಿರುವ ಮುಕ್ಕಾಟಿ ಬಾಣೆ ಅಂಬಲದಿಂದ ಬಿದಿರಿನಿಂದ ಕೃತಕ ವಾಗಿ ತಯಾರಿಸಿದ ಕುದುರೆಯನ್ನು ಹೊತ್ತು ಬೆಟ್ಟಕ್ಕೆ ಆಗಮಿಸಿದರು. ವ್ರತಧಾರಿಗಳು ಬೆಟ್ಟಕ್ಕೆ ಸಾಂಪ್ರದಾಯಿಕ ವಾದ್ಯಗೋಷ್ಠಿ ಯೊಂದಿಗೆ ಬಂದು, ಆಚರಣೆ ಮಾಡಿದರು. ದೇವರನ್ನು ವಿವಿಧ ಹೆಸರಿನಲ್ಲಿ ಬೇಡುವ ಮೂಲಕ ಪ್ರಾರ್ಥಿಸಿದರು. ಗ್ರಾಮದ ಪುರುಷರು, ಮಹಿಳೆಯರು ಮಕ್ಕಳು ಸೇರಿ ಸಂಭ್ರಮಿಸಿದರು.

ಮನೆಯಪಂಡ ಕುಟುಂಬ ದೇವತಕ್ಕರಾಗಿ, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿ ಕಾರ್ಯ ಮಾಡುತ್ತಾರೆ. ಇವರೊಂದಿಗೆ ಸ್ಥಳಿಯ ಕುಟುಂಬ ಹಾಗೂ ಗ್ರಾಮಸ್ಥರು ಆಚರಣೆಯಲ್ಲಿ ಪಾಲ್ಗೊಂಡರು.