ಮಡಿಕೇರಿ, ಅ. 20: ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಶುಚಿತ್ವ ಮತ್ತಿತರ ಮೂಲ ಸೌಲಭ್ಯ ಸಂಬಂಧ ಪರಿಶೀಲನೆ ಮಾಡಿದರು.
ನಗರದ ಚಾಮುಂಡೇಶ್ವರಿ ನಗರ, ಆಜಾದ್ ನಗರ, ತ್ಯಾಗರಾಜ ಕಾಲೋನಿ, ಗೌಳಿಬೀದಿ ಹಾಗೂ ಪಂಪಿನ ಕೆರೆಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯ ಮತ್ತು ಅಭಿವೃದ್ಧಿ ಸಂಬಂಧ ಸ್ಥಳೀಯ ಸಂಸ್ಥೆ ಸದಸ್ಯರು ಹಾಗೂ ಪೌರಾಯುಕ್ತರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮನ್ಸೂರ್, ಪ್ರಕಾಶ್ ಆಚಾರ್ಯ, ಪೌರಾಯುಕ್ತೆ ಬಿ. ಶುಭ, ರಮೇಶ್, ವನಿತಾ ಇತರರು ಇದ್ದರು.