ಸಿದ್ದಾಪುರ, ಅ. 20: ಕುಶಾಲನಗರವನ್ನು ತಾಲೂಕು ಮಾಡಬೇಕು ಎಂದು ಒತ್ತಾಯಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ಹಾಗೂ ನೆಲ್ಯಹುದಿಕೇರಿಯ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ನೆಲ್ಯಹುದಿಕೇರಿ ಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕಾವೇರಿ ಹೋರಾಟ ಸಮಿತಿಯ ಮುಖಂಡ ಭರತ್ ಮಾತನಾಡಿ, ಸರಕಾರ ಈಗಾಗಲೆ ನೂತನವಾಗಿ 49 ತಾಲೂಕನ್ನು ಮಾಡಿದ್ದು, 19 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಎಲ್ಲಾ ವಿಧದಲ್ಲಿ ತಾಲೂಕು ರಚನೆಗೆ ಅರ್ಹವಾಗಿರುವ ಸರಕಾರಕ್ಕೆ ಯಾವದೇ ವೆಚ್ಚವಿಲ್ಲದೆ ಕುಶಾಲನಗರ ವನ್ನು ಪ್ರತ್ಯೇಕ ತಾಲೂಕ್ಕಾಗಿ ಮಾಡಬಹುದಾಗಿದೆ. ಸರ್ಕಾರವು ಕೂಡಲೇ ಪ್ರತ್ಯೇಕ ತಾಲೂಕು ರಚನೆಗೆ ಮುಂದಾಗ ಬೇಕೆಂದು ಆಗ್ರಹಿಸಿದರು. ಅಲ್ಲದೆ ತಾ. 30 ರಂದು ಪ್ರತ್ಯೇಕ ತಾಲೂಕು ರಚನೆಗೆ ಒತ್ತಾಯಿಸಿ ಕುಶಾಲನಗರ ದಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಿದ್ದು, ತಾಲೂಕಿನ ಬೇಡಿಕೆಗಾಗಿ ನಾಳೆಯಿಂದ ಮುಖ್ಯಮಂತ್ರಿಯ ವಿಳಾಸಕ್ಕೆ ಪ್ರತಿಯೊಬ್ಬರೂ ಪತ್ರಬರೆದು ಕಾರ್ಡ್ ಚಳವಳಿಯ ಮೂಲಕ ಬೇಡಿಕೆ ಯನ್ನು ಮುಂದಿಡುವದಾಗಿ ಹೇಳಿದರು.
ಈ ಸಂದಭರ್À ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ, ಸದಸ್ಯರುಗಳಾದ ಅಪ್ಸಲ್, ರಜಾಕ್, ಮುಸ್ತಫ, ಬಿಂದು, ಮೈನಾ, ಹೋರಾಟ ಸಮಿತಿಯ ಪದಾಧಿಕಾರಿ ಗಳಾದ ಮಹಮ್ಮದ್, ಮಣಿ, ಶಿಹಾಬುದ್ದಿನ್, ಗ್ರೇಸಿ, ಮಣಿ ಹಬೀಬ್, ಶೌಕತ್ ಅಲಿ, ಸುರೇಶ್, ಅಶೋಕ್ ಮತ್ತಿತರರು ಹಾಜರಿದ್ದರು.