ಮಡಿಕೇರಿ ಅ.19 : ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿ.ಕೆ.ಲೈಲ ಎಂಬವರು ಅಡವಿಟ್ಟ ಚಿನ್ನಾಭರಣಗಳು ನಕಲಿ ಎಂದು ಸಂಘ ಮಾಡಿರುವ ಆರೋಪದ ಕುರಿತು ಸಿಐಡಿ ತನಿಖೆಯಾಗಬೇಕೆಂದು ಅಮ್ಮತ್ತಿ ಹೋಬಳಿಯ ನಾಗರಿಕ ಹೋರಾಟ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷÀ ಎ.ಮಹದೇವು, ಪ್ರಕರಣದ ಕುರಿತು ಸಮಗ್ರ ತನಿಖೆÉ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತು ಅಡವಿಟ್ಟ ಚಿನ್ನವನ್ನು ಮರಳಿಸದಿದ್ದಲ್ಲಿ ಸಹಕಾರ ಸಂಘದ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಸುಮಾರು 40 ಪವನ್ ಚಿನ್ನವನ್ನು ಅಡವಿಟ್ಟ ಪಿ.ಕೆ. ಲೈಲ ಎಂಬವರಿಗೆ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ 22 ಲಕ್ಷ ರೂ.ಗಳವರೆಗೆ ಹಣವನ್ನು ನೀಡಿದೆ. ಆದರೆ, ಈ ಸಂಘದಲ್ಲಿ ಸುಮಾರು 39 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಕಾರ್ಯದರ್ಶಿಯವರು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತೆಂದು ಹೇಳಲಾಗುತ್ತಿ ದ್ದು, ಈ ಸಂದರ್ಭ ದೊರೆತ ಪಿ.ಕೆ. ಲೈಲ ಎಂಬವರ ಚಿನ್ನಾಭರಣ ನಕಲಿ ಎಂದು ಘೋಷಿಸಲಾಗಿದೆ. ಈ ಪ್ರಕರಣದ ಹಿಂದೆ ದೊಡ್ಡ ಸಂಚು ನಡೆದಿದ್ದು, ಆಡಳಿತ ಮಂಡಳಿಯ ಪಾತ್ರವೂ ಇದೆ. ಈ ಸಹಕಾರ ಸಂಘದ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ಪ್ರಕರಣವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಮಹದೇವು ಆರೋಪಿಸಿದರು.

ಲೈಲ ಅವರಿಂದ ಚಿನ್ನಾಭರಣ ಪಡೆದು ಸಂಘÀ ನೀಡಿರುವ ರಶೀದಿಯಲ್ಲಿ ಸರಿಯಾದ ಸಹಿ ಮತ್ತು ಮೊಹರು ಇಲ್ಲದೆ ಇರುವದು ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ದಾಖಲೆಯ ಪ್ರತಿಯನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿ ಗಳು ಪ್ರಕರಣದ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಒಟ್ಟು ಪ್ರಕರಣವನ್ನು ಸಿಐಡಿ ತನಿಖೆÉಗೆ ಒಳಪಡಿಸಬೇಕೆಂದು ಮಹದೇವು ಒತ್ತಾಯಿಸಿದರು.

ಬ್ಯಾಂಕ್ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಚಿನ್ನ ಅಡವಿಟ್ಟ ಲೈಲ ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕೆಂದರು. ತಮಗೆ ಪ್ರಕರಣವನ್ನು ಕೈಗೆತ್ತಿಕೊಳ್ಳದಂತೆ ಜೀವಬೆದರಿಕೆ ಬಂದಿತ್ತೆಂದು ತಿಳಿಸಿದ ಮಹದೇವು, ಸಂಘÀದ ಆಡಳಿತ ಮಂಡಳಿಯನ್ನು ವಿಸರ್ಜಿಸಿ ನೂತನ ಆಡಳಿತ ಮಂಡಳಿಯನ್ನು ರಚಿಸಬೇಕೆಂದು ಒತ್ತಾಯಿಸಿದರು. ಇನ್ನೂ ಅನೇಕ ಇದೇ ರೀತಿಯ ಅವ್ಯವಹಾರದ ಪ್ರಕರಣಗಳು ಸಂಘದಲ್ಲಿ ನಡೆದಿರುವ ಬಗ್ಗೆ ಸಂಶಯವಿದೆಯೆಂದು ಆರೋಪಿಸಿದ ಅವರು ಸೂಕ್ತ ತನಿಖೆ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ರಾಮ ದಾಸ್, ಉಪಕಾರ್ಯದರ್ಶಿ ತಂಗ ರಾಜು, ಉಪಾಧ್ಯಕ್ಷ ನಾಸಿರ್ ಹಾಗೂ ಸದಸ್ಯ ಹಲೀಂ ಉಪಸ್ಥಿತರಿದ್ದರು.