ಮೂರ್ನಾಡು, ಅ. 19: ಮೂರ್ನಾಡು ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಒತ್ತೋರ್ಮೆ ಕೂಟದಲ್ಲಿ ಸಮಾಜದ ಸದಸ್ಯರುಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮೂರ್ನಾಡು ಕೊಡವ ಸಮಾಜ ದಲ್ಲಿ ಏರ್ಪಡಿಸಲಾದ ಕಾರ್ಯಕ್ರಮ ದಲ್ಲಿ ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಯು. ಗಣೇಶ್ ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಮಹಿಳೆಯರಿಗೆ, ಪುರುಷರಿಗೆ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ, ಭಾರದ ಕಲ್ಲು ಎಸೆತ, ಕಣ್ಣು ಕಟ್ಟಿ ಮಡಿಕೆ ಓಡೆಯುವದು, ಹಗ್ಗ ಜಗ್ಗಾಟ, ಮಕ್ಕಳಿಗೆ ಕಾಳು ಹೆಕ್ಕುವದು, ಬಲೂನ್ ಹೊಡೆಯುವದು, ಹಾಕಿ ಗಾಲ್ಫ್, ಬುಕ್ ಬ್ಯಾಲೆನ್ಸ್, ವಾಲಗ ನೃತ್ಯ ನಡೆಯಿತು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿದರು. ವೇದಿಕೆಯಲ್ಲಿ ಮಂಡೇಪಂಡ ಪಾರ್ವತಿ ಕುಶಾಲಪ್ಪ, ಕೊಡವ ಸಮಾಜದ ಉಪಾಧ್ಯಕ್ಷ ನಂದೇಟಿರ ಗಾಂಧಿ ದೇವಯ್ಯ, ಕಾರ್ಯದರ್ಶಿ ಬಡುವಂಡ ಕೆ. ಚಂಗಪ್ಪ, ಖಜಾಂಚಿ ಬಾಚೆಟ್ಟಿರ ಸಂಜು ಸುಬ್ಬಯ್ಯ, ಸದಸ್ಯರು ಉಪಸ್ಥಿತರಿದ್ದರು.
ಕಳೆದ ಸಾಲಿನಲ್ಲಿ ಏಳನೆ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬೊಳಕಾರಂಡ ಬೊಳ್ಳಮ್ಮ, ಪಾಂಡಂಡ ದೇಚಮ್ಮ, ಹತ್ತನೇ ತರಗತಿಯಲ್ಲಿ ಬೊಳಕಾರಂಡ ಅಕ್ಕಮ್ಮ, ಅವರೆಮಾದಂಡ ಅಶಿಕ್ ಬೋಪಣ್ಣ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಾಂಚೀರ ಪೂವಣ್ಣ, ಬೊಳ್ಳಚೆಟ್ಟಿರ ರಜತ್ ಅಪ್ಪಣ್ಣ ವಾಣಿಜ್ಯ ವಿಭಾಗದಲ್ಲಿ ಮಡೆಯಂಡ ನಿರನ್, ನೆರವಂಡ ವಿಶಲ್ ದೇವಯ್ಯ, ಕಲಾ ವಿಭಾಗದಲ್ಲಿ ತಿರುಟೇರ ಗೌತಮ್ ಅವರುಗಳಿಗೆ ದತ್ತಿನಿಧಿ ವಿತರಿಸಲಾ ಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾಜದಿಂದ ಬಹುಮಾನಗಳನ್ನು ವಿತರಿಸಲಾಯಿತು.