ವೀರಾಜಪೇಟೆ, ಅ. 19: ವೀರಾಜಪೇಟೆಯ ಲಯನ್ಸ್ ಕ್ಲಬ್ ವತಿಯಿಂದ ‘ಸ್ವಚ್ಛ ಭಾರತದ’ ಶೀರ್ಷಿಕೆಯಡಿಯ ‘ಪೀಸ್ ಪೋಸ್ಟರ್ ಚಿತ್ರಕಲಾ ಸ್ಪರ್ಧೆ’ ಯಲ್ಲಿ ಮಡಿಕೇರಿಯ ನವೋದಯ ಶಾಲೆಯ ಹವ್ಯಸ್ ಪ್ರಥಮ, ಗೋಣಿಕೊಪ್ಪಲಿನ ಸಂತ ಥೋಮಸ್ ಶಾಲೆಯ ಬಿ.ಜೆ.ಗಗನ್ ದ್ವಿತೀಯ ಹಾಗೂ ಮಡಿಕೇರಿ ಸಂತ ಜೋಸೆಫ್ ಶಾಲೆಯ ಸಿ.ಬಿ.ಪೂಜಾ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಅತಿಥಿಯಾಗಿ ಸಮಾಜ ಸೇವಕರಾದ ಕೆ. ಜಯ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ವಹಿಸಿದ್ದರು. ಇಲ್ಲಿನ ಸಿದ್ದಾಪುರ ರಸ್ತೆಯ ನರ್ಸಿಂಗ್ ತರಬೇತಿ ಶಾಲೆಯ ಪಟ್ಟಡ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಕ್ಲಬ್‍ನ ಪದಾಧಿಕಾರಿಗಳಾದ ಅಮ್ಮಣಿಚಂಡ ಪ್ರವೀಣ್, ಬೊಪ್ಪಂಡ ತ್ರಿಶು,ಪಟ್ಟಡ ದಿವ್ಯ, ಬಬ್ಬು ಸೋಮಣ್ಣ ಹಾಜರಿದ್ದರು. ತೀರ್ಪುಗಾರರಾಗಿ ಚಿತ್ರಕಲಾವಿದ ಬಿ.ಆರ್.ಸತೀಶ್ ಕಾರ್ಯ ನಿರ್ವಹಿಸಿದರು. ಪ್ರತಾಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಸುಬ್ಬಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವತ್ ಗಣಪತಿ ವಂದಿಸಿದರು.