ಮಡಿಕೇರಿ, ಅ. 20: ಕೊಡಗಿನ ಹುತ್ತರಿ ಹಬ್ಬ, ಕೈಲ್ ಮುಹೂರ್ತ ಸೇರಿದಂತೆ ವಿಶೇಷ ಪರ್ವ ಕಾಲದಲ್ಲಿ ಜಿಲ್ಲೆಯ ದೇವರ ಕಾಡುಗಳಲ್ಲಿ ವನ್ಯ ಪ್ರಾಣಿಗಳ ಬೇಟೆ ಹಾಗೂ ಅಲ್ಲಿನ ಮರ - ಮುಟ್ಟುಗಳನ್ನು ಆಯಾ ದೇವಾಲಯಗಳಿಗೆ ಸಂಬಂಧಿಸಿದ ಭಕ್ತರು ಮತ್ತು ಗ್ರಾಮಸ್ಥರಿಗೆ ಹಕ್ಕುಗಳಿದ್ದು, ಅರಣ್ಯಾಧಿಕಾರಿಗಳು ಸರಕಾರವನ್ನು ದಿಕ್ಕು ತಪ್ಪಿಸಿರುವದಾಗಿ ಕಳೆದ ಜೂನ್‍ನಲ್ಲಿ ಜರುಗಿದ ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಸ್ತಾಪಿಸಿದ್ದಾರೆ.
1985ರ ಅಕ್ಟೋಬರ್ 26 ರಂದು ಕೊಡಗಿನ ದೇವರ ಕಾಡುಗಳನ್ನು ಸರಕಾರವು ಅರಣ್ಯ ಇಲಾಖೆಯ ಸುಪರ್ದಿಗೆ ಹಸ್ತಾಂತರ ಮಾಡುವ ಸಂದರ್ಭ, 1963ರ ಅರಣ್ಯ ಕಾಯ್ದೆಯ ಕಲಂ 4,17 ಹಾಗೂ 26 ಅಡಿಯಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸ ಲಾಗಿದೆ ಎಂದು ಬೋಪಯ್ಯ ಬೊಟ್ಟು ಮಾಡಿದ್ದಾರೆ.
ಮೇಲಿನ ಆದೇಶ ಪ್ರಕಾರ ಕೊಡಗಿನ ದೇವಾಲಯಗಳಿಗೆ ಮಡಿಕೇರಿ, ಅ. 20: ಕೊಡಗಿನ ಹುತ್ತರಿ ಹಬ್ಬ, ಕೈಲ್ ಮುಹೂರ್ತ ಸೇರಿದಂತೆ ವಿಶೇಷ ಪರ್ವ ಕಾಲದಲ್ಲಿ ಜಿಲ್ಲೆಯ ದೇವರ ಕಾಡುಗಳಲ್ಲಿ ವನ್ಯ ಪ್ರಾಣಿಗಳ ಬೇಟೆ ಹಾಗೂ ಅಲ್ಲಿನ ಮರ - ಮುಟ್ಟುಗಳನ್ನು ಆಯಾ ದೇವಾಲಯಗಳಿಗೆ ಸಂಬಂಧಿಸಿದ ಭಕ್ತರು ಮತ್ತು ಗ್ರಾಮಸ್ಥರಿಗೆ ಹಕ್ಕುಗಳಿದ್ದು, ಅರಣ್ಯಾಧಿಕಾರಿಗಳು ಸರಕಾರವನ್ನು ದಿಕ್ಕು ತಪ್ಪಿಸಿರುವದಾಗಿ ಕಳೆದ ಜೂನ್‍ನಲ್ಲಿ ಜರುಗಿದ ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಸ್ತಾಪಿಸಿದ್ದಾರೆ.
1985ರ ಅಕ್ಟೋಬರ್ 26 ರಂದು ಕೊಡಗಿನ ದೇವರ ಕಾಡುಗಳನ್ನು ಸರಕಾರವು ಅರಣ್ಯ ಇಲಾಖೆಯ ಸುಪರ್ದಿಗೆ ಹಸ್ತಾಂತರ ಮಾಡುವ ಸಂದರ್ಭ, 1963ರ ಅರಣ್ಯ ಕಾಯ್ದೆಯ ಕಲಂ 4,17 ಹಾಗೂ 26 ಅಡಿಯಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸ ಲಾಗಿದೆ ಎಂದು ಬೋಪಯ್ಯ ಬೊಟ್ಟು ಮಾಡಿದ್ದಾರೆ.
ಮೇಲಿನ ಆದೇಶ ಪ್ರಕಾರ ಕೊಡಗಿನ ದೇವಾಲಯಗಳಿಗೆ ಇಲಾಖೆ ಅಡ್ಡಿಪಡಿಸುವಂತಿಲ್ಲ ಎಂಬ ಕುರಿತು ಸದನದಲ್ಲಿ ಬೊಟ್ಟು ಮಾಡಿದ್ದಾರೆ. ಅಲ್ಲದೆ ದೇವರ ಕಾಡು ಮುಂತಾದೆಡೆಗಳಲ್ಲಿ ಗ್ರಾಮಸ್ಥರು ಹಾಗೂ ದೇವಾಲಯಗಳಿಗೆ ಸಂಬಂಧಪಟ್ಟವರು ಸಂಚರಿಸುವ ದಾರಿಯನ್ನು ತಡೆಯುವಂತಿಲ್ಲ; ಭಕ್ತರ ಅಥವಾ ಗ್ರಾಮಸ್ಥರ ಸಾಕು ಪ್ರಾಣಿಗಳು, ವಿಶೇಷವಾಗಿ ದನಗಳನ್ನು ಮೇಯಿಸಲು ಅವಕಾಶ ನೀಡಿರುವದಾಗಿದೆ.
ಕೆಲವೊಮ್ಮೆ ದೇವರ ಕಾಡುವಿನ ಮರಗಳನ್ನು ಅಭಿವೃದ್ಧಿ ಸಂಬಂಧ ಕಡಿಯಲು ಮತ್ತು ದೇಗುಲಕ್ಕೆ ಸಂಬಂಧಿಸಿದ ವಸ್ತುಗಳ ತಯಾರಿಗಾಗಿ ಅರಣ್ಯ ಇಲಾಖೆಯ ಅನುಮತಿ ಕೋರಿದರೆ ಆ ಬಗ್ಗೆ ಇಲಾಖೆಯಿಂದ ಅವಕಾಶ ಕಲ್ಪಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಈ ಹಕ್ಕುಗಳನ್ನು ಪಡೆಯುವದು ಗ್ರಾಮಸ್ಥರ ಆದ್ಯ ಕರ್ತವ್ಯವೆಂದು ಶಾಸಕರು ಪ್ರತಿಪಾದಿಸಿದ್ದಾರೆ.
ಮಾತ್ರವಲ್ಲದೆ ಕೊಡಗಿನ ಸಾಂಪ್ರದಾಯಿಕ ಹಬ್ಬಗಳ ಸಂದರ್ಭ ಪರಂಪರಾಗತ ಹಕ್ಕಾಗಿರುವ ಬೇಟೆಯನ್ನು ಗ್ರಾಮಸ್ಥರೊಡಗೂಡಿ ಆಯಾ ಭಕ್ತರು ಮುಂದುವರಿಸಿಕೊಂಡು ಬಂದಿದ್ದು, ಅದಕ್ಕೆ ಅಡ್ಡಿ ಪಡಿಸದಂತೆ ಮೇಲಿನ ಕಾನೂನಿನಲ್ಲಿ ನಿರ್ದೇಶಿಸಲಾಗಿದ್ದರೂ, ಇಂತಹ ಅವಕಾಶವನ್ನು ನೀಡದೆ ಅರಣ್ಯ ಇಲಾಖೆಯು ಸರಕಾರವನ್ನು ತಪ್ಪುದಾರಿಗೆ ಎಳೆಯುತ್ತಾ ಬಂದಿರುವದಾಗಿ ಅಧಿವೇಶನ ಸಂದರ್ಭ ಕೆ.ಜಿ. ಬೋಪಯ್ಯ ಸ್ಪಷ್ಟ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
ಇದರೊಂದಿಗೆ 1991ರಲ್ಲಿ ಅರಣ್ಯ ಇಲಾಖೆಗೆ ವಹಿಸಲಾಗಿದ್ದ ‘ಸಿ ಮತ್ತು ಡಿ’ (ಅ &amdiv;ಆ) ಭೂಮಿಯನ್ನು ಕೂಡ ಸರಕಾರ ಹಿಂಪಡೆದು ಕಂದಾಯ ಇಲಾಖೆಯ ಸುಪರ್ದಿಗೆ ನೀಡಿರುವ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ಈ ಸಂಬಂಧ ತಾ. 5.6.2017 ರಂದು ಸರಕಾರವು ಕೆಲವೊಂದು ತಿದ್ದುಪಡಿಯೊಂದಿಗೆ ನೂತನ ಸುತ್ತೋಲೆ ಹೊರಡಿಸಿರುವದಾಗಿ ಖಚಿತಪಡಿಸಿರುವ ಕೆ.ಜಿ. ಬೋಪಯ್ಯ ಅವರು, ದೇವರ ಕಾಡುವಿನಲ್ಲಿ ಬೇಟೆಯಾಡುವ ಹಕ್ಕು ಮುಂತಾದ ಪ್ರಸ್ತಾವನೆಗೆ ಸರಕಾರದಿಂದ ಯಾವದೇ ಉತ್ತರ ಸಿಕ್ಕಿಲ್ಲವೆಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.