ಮಡಿಕೇರಿ, ಅ. 19: ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಸಭೆ ಮಡಿಕೇರಿಯಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಎಸ್.ಜೆ. ದೇವದಾಸ್ ಸೋಮವಾರಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ನಾಗರಾಜು ಶನಿವಾರಸಂತೆ, ಖಜಾಂಚಿಯಾಗಿ ಎ.ಜಿ. ಹರೀಶ್ ಮಡಿಕೇರಿ, ಉಪಾಧ್ಯಕ್ಷರಾಗಿ ಎ.ಪಿ. ಲೋಕೇಶ್ ವೀರಾಜಪೇಟೆ, ಎಸ್.ಬಿ. ಲೀಲಾರಂ ಸೋಮವಾರಪೇಟೆ, ಎ.ಎ. ರಮೇಶ್ ಮಡಿಕೇರಿ ಹಾಗೂ ಪ್ರತಿ ತಾಲೂಕಿನಿಂದ ಆರು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಕರ್ನಾಟಕ ರಾಜ್ಯ ವಿಶ್ವ ಕರ್ಮ ಸಮಾಜದ ಜಿಲ್ಲಾ ನಿರ್ದೇಶಕ ಯು. ಕುಮಾರ್ ಕುಶಾಲನಗರ, ಮಾಜಿ ನಾಮ ನಿರ್ದೇಶಕ, ಬಿ.ಸಿ. ಅಶೋಕ್, ಮಾಜಿ ಅಧ್ಯಕ್ಷ ಇ.ಎಲ್. ಅಶೋಕ್ ಮತ್ತಿತರರು ಹಾಜರಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕರಾಗಿ ಬಿ.ಬಿ. ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲೆಯಲ್ಲಿ ಹಾಲಿ ವಾಸವಾಗಿರುವ 2ಎ ಅಡಿಯಲ್ಲಿ ಬರುವ ಎಲ್ಲಾ ವಿಶ್ವಕರ್ಮ ಜನಾಂಗದವರು, ಭಾಷೆ, ಕಸುಬು, ಪ್ರಾಂತ್ಯ, ಆಹಾರ ಪದ್ಧತಿ ಲೆಕ್ಕಿಸದೆ ಎಲ್ಲರೂ ಒಗ್ಗೂಡಬೇಕು. ಅಭಿವೃದ್ಧಿ ನಿಗಮದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಅಧ್ಯಕ್ಷರು ಕೋರಿದರು.