ನಾಪೆÇೀಕ್ಲು, ಅ. 20: 1785 ರಲ್ಲಿ ಕೊಡವರ ನರಮೇಧ ನಡೆದ ದೇವಾಟ್ ಪರಂಬ್ವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಗುರುತಿಸಿರುವ ಸ್ಥಳದಲ್ಲಿ ಪಾರಮಾರ್ಥಿಕ ಸಂಸ್ಕಾರ ನೀಡುವ ಸಲುವಾಗಿ ಕಾವೇರಿ ಚಂಗ್ರಾಂದಿ ಪ್ರಯುಕ್ತ ಜನಪದೀಯ ‘ಬೊತ್ತ್ ಕುತ್ತ್ವ’ ಕಾರ್ಯಕ್ರಮವನ್ನು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕಾವೇರಿ ಸಂಕ್ರಮಣಕ್ಕೆ ಮೊದಲು ಕೊಡಗಿನ ಭತ್ತದ ಗದ್ದೆ, ಬೋಟಿ ಕಳ, ಸಗಣಿ ಗುಂಡಿ, ಬಾವಿ, ದನದ ಕೊಟ್ಟಿಗೆ, ಗೇಟ್, ಮನೆಯ ಮುಂಭಾಗ, ತೋಟಗಳಿಗೆ ಬೊತ್ತ್ ನೆಡುವ ಜನಪದೀಯ ಪದ್ಧತಿ ರೂಢಿಗತವಾಗಿದೆ. ಇದು ಅನಾದಿ ಕಾಲದಿಂದಲೂ ನಡೆದು ಬರುತ್ತಿದೆ. ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಮಾರನೆ ದಿನ ನಸುಕಿನಲ್ಲಿ ಬೊತ್ತ್ ಬಳ್ಳಿಗೆ ದೋಸೆ ಸಮರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ ಎಂದರು. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು 12.12.1785ರಲ್ಲಿ ಟಿಪ್ಪು ಸುಲ್ತಾನನ ಮೋಸಕ್ಕೆ ಬಲಿಯಾದ ಕೊಡವರ ನರಮೇಧ ದುರಂತ ನಡೆದ ದೇವಾಟ್ ಪರಂಬ್ ಸಮಾಧಿ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಲು ಒತ್ತಾಯಿಸಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಕಾವೇರಿ ಸಂಕ್ರಮಣಕ್ಕೆ ಕಾವೇರಿಗೆ ಯಾತ್ರೆ ಬರುವ ಪ್ರತಿಯೊಬ್ಬ ಕೊಡವರೂ ದೇವಾಟ್ ಪರಂಬು ತಲುಪುವಾಗ ಐದು ನಿಮಿಷ ನಿಂತು ಮರದ ಸೊಪ್ಪಿನ ಗೊನೆಯೊಂದನ್ನು ಇಟ್ಟು ಗೌರವಾಂಜಲಿ ಅರ್ಪಿಸುವ ಪದ್ಧತಿ ಇಂದಿಗೂ ಮುಂದುವರೆದಿದೆ ಎಂದರು.
ಈ ಸಂದರ್ಭ ಸಂಘಟನೆಯ ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರೆಮ್ಮೆ ನಾಣಯ್ಯ, ಚಂಬಂಡ ಜನತ್ ಕುಮಾರ್, ಮೊಣ್ಣಂಡ ಕಾರ್ಯಪ್ಪ, ಅರೆಯಡ ಗಿರೀಶ್, ಕಲಿಯಂಡ ಸುಬ್ಬಯ್ಯ, ಕಾಟುಮಣಿಯಂಡ ಉಮೇಶ್ ಇದ್ದರು.