ಸಿದ್ದಾಪುರ, ಅ. 20: ಕೊಂಡಂಗೇರಿ ವಲಯ ಕಾಂಗ್ರೆಸ್ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಸಿ. ಹಸೈನಾರ್ ಹಾಜಿಗೆ ಸನ್ಮಾನ ಮಾಡಲಾಯಿತು.
ಕೊಂಡಂಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಾದಲಿ ಹಾಜಿ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಅಭಿನಂದನ ಸಭೆಯಲ್ಲಿ ಪಿ.ಸಿ ಹಸೈನಾರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಇಬ್ರಾಹಿಂ ಹಾಜಿ, ಮೊಯ್ದು, ಹಸೈನಾರ್, ಅಲಿ, ಸವಾಬ್, ಹಂಸ, ಜುಬೈರ್, ಹನೀಫ್, ಮುಸ್ತಾಫ, ಅಬ್ಬಾಸ್, ಸಿರಾಜ್, ಖಾದರ್, ಹಂಸ, ಸಾದಲಿ ಸೇರಿದಂತೆ ಮತ್ತಿತರರು ಹಾಜರಿದ್ದರು.