ಗೋಣಿಕೊಪ್ಪಲು, ಅ. 19: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಷನ್ ಹಾಕಿ ಲೀಗ್‍ನ ಮೊದಲ ದಿನ ಸೋಮವಾರಪೇಟೆ ಡಾಲ್ಫಿನ್ಸ್, ಅಮ್ಮತ್ತಿ ಈಗಲ್ಸ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಚಾರ್ಮರ್ಸ್ ಹಾಗೂ ಬೇಗೂರು ತಂಡಗಳು ಮುನ್ನಡೆ ಸಾಧಿಸಿವೆ.

ಸೋಮವಾರಪೇಟೆ ಡಾಲ್ಫಿನ್ಸ್ ತಂಡವು ಕಾಕೋಟುಪರಂಬು ಎಸ್‍ಆರ್‍ಸಿ ತಂಡದ ವಿರುದ್ಧ 3-2 ಗೋಲುಗಳ ಗೆಲುವು ಪಡೆಯಿತು. ಡಾಲ್ಫಿನ್ಸ್ ಪರ 16 ಹಾಗೂ 23ರಲ್ಲಿ ಪ್ರಸನ್ನ 2 ಗೋಲು, 20ರಲ್ಲಿ ಕಾಳಿಮುತ್ತ, ಕಾಕೋಟುಪರಂಬು ಪರ 24 ಹಾಗೂ 42 ನೇ ನಿಮಿಷದಲ್ಲಿ ಚೇತನ್ 2 ಗೋಲು ಹೊಡೆದರು.

ಅಮ್ಮತ್ತಿ ಈಗಲ್ಸ್ ತಂಡವು ಯುಎಸ್‍ಸಿ ಬೇರಳಿನಾಡ್ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಅಮ್ಮತ್ತಿ ಪರ 9 ಹಾಗೂ 49ರಲ್ಲಿ ಅವಿನಾಶ್ 2 ಗೋಲು, 11ರಲ್ಲಿ ಅಯ್ಯಪ್ಪ, ಬೇರಳಿನಾಡ್ ಪರ 54 ನೇ ನಿಮಿಷದಲ್ಲಿ ಮಂಜು 1ಗೋಲು ಹೊಡೆದರು.

ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಬಾಡಗ ಆರ್‍ಎಸ್‍ಸಿ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿತು. ಕೂಡಿಗೆ ಪರ 2ರಲ್ಲಿ ಸಿದ್ದಪ್ಪ, 49ರಲ್ಲಿ ಗಣೇಶ್, 59ರಲ್ಲಿ ಚೇತನ್, ಬಾಡಗ ಪರ 5ರಲ್ಲಿ ಗೌರವ್, 40ರಲ್ಲಿ ದಿಲನ್ ಗೋಲು ಹೊಡೆದರು.

ಚಾರ್ಮರ್ಸ್ ತಂಡವು ಮರ್ಕರಾ ಯುನೈಟೆಡ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿತು. ಚಾರ್ಮರ್ಸ್ ಪರ 17 ರಲ್ಲಿ ಜೋಯಪ್ಪ, 49 ರಲ್ಲಿ ಸಾವನ್ ತಲಾ ಒಂದೊಂದು ಗೋಲು ಹೊಡೆದರು.

ಬೇಗೂರು ತಂಡವು ಕೋಣನಕಟ್ಟೆ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಪಡೆಯಿತು. ಬೇಗೂರು ಪರ 22 ರಲ್ಲಿ ಉತ್ತಪ್ಪ, 53 ರಲ್ಲಿ ಮಣಿ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು.