ಗೋಣಿಕೊಪ್ಪಲು, ಅ. 20: ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಮತ್ತು ವಿಜ್ಞಾನ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಟಾಕಿ ಮುಕ್ತ ದೀಪಾವಳಿಯ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಡಿ. ಕೃಷ್ಣ ಚೈತನ್ಯ ಮಾತಾಡಿ, ಪಟಾಕಿಯಿಂದ ದೇಹದ ಭಾಗಗಳು ಸುಟ್ಟುಹೋಗುತ್ತವೆ. ಕಣ್ಣುಗಳ ದೃಷ್ಟಿ ಕಳೆದುಹೋಗುತ್ತದೆ, ಕಿವಿ ಕಿವುಡಾಗುತ್ತವೆ ಅಲ್ಲದೇ ಮನೆಯಲ್ಲಿ ಮತ್ತು ನೆರೆಹೊರೆ ಯಲ್ಲಿ ವಾಸ ಮಾಡುತ್ತಿರುವ ಹೃದ್ರೋಗಿಗಳಿಗೂ ಅಪಾಯಕಾರಿ ಯಾಗುತ್ತದೆ ಎಂದು ನುಡಿದರು.