ಕುಶಾಲನಗರ, ಅ. 21: ಅಖಿಲ ಭಾರತ ಸನ್ಯಾಸಿ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ 7ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಗೆ ತಾ.22ರಂದು (ಇಂದು) ತಲಕಾವೇರಿಯಿಂದ ಚಾಲನೆ ದೊರೆಯಲಿದೆ. aಬೆಳಿಗ್ಗೆ 8.30ಕ್ಕೆ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪವಿತ್ರ ತೀರ್ಥ ಪೂಜೆ ನಡೆಸಿ ನಂತರ ಯಾತ್ರೆ ಭಾಗಮಂಡಲ ಮೂಲಕ ಬಲಮುರಿ, ವೀರಾಜಪೇಟೆ ಕಡೆಗೆ ತೆರಳಲಿದೆ. ರಾತ್ರಿ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದಲ್ಲಿ ತಂಡ ವಾಸ್ತವ್ಯ ಹೂಡಲಿದೆ. ದಕ್ಷಿಣ ಭಾರತದ 50 ಕ್ಕೂ ಅಧಿಕ ಸಾಧುಸಂತರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು 23 ರಂದು ಕುಶಾಲನಗರ ಮೂಲಕ ತೆರಳಿ ಕಣಿವೆಯಲ್ಲಿ ವಾಸ್ತವ್ಯ ಹೂಡಲಿದೆ. 24 ರಂದು ಹಾಸನ ಕಡೆಗೆ ಯಾತ್ರೆ ತೆರಳಲಿದೆ.ನವೆಂಬರ್ 13 ರಂದು ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್‍ನಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.