ಸೋಮವಾರಪೇಟೆ, ಅ.21: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೂಲಕ ತಾ. 24 ರಿಂದ 29ರವರೆಗೆ ಸಮೀಪದ ಅಬ್ಬೂರುಕಟ್ಟೆಯಲ್ಲಿ ಯೋಗ ತರಬೇತಿ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕಿ ರಾಗಿಣಿ ತಿಳಿಸಿದ್ದಾರೆ.
ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಯೋಗ ತರಬೇತಿ ಶಿಬಿರ ನಡೆಯಲಿದ್ದು, ಸಂಸ್ಥೆಯ ಶಿಕ್ಷಕರಾದ ಸುನಿಲ್ ಚಂದ್ರ ಅವರು ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ:9945987717 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ರಾಗಿಣಿ ತಿಳಿಸಿದ್ದಾರೆ.