ಮಡಿಕೇರಿ, ಅ.21: ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ‘ವಿಷನ್-2025’ ಎಂಬ ಹೆಸರಿನಡಿ ನೀಲ ನಕ್ಷೆ ಅನುಷ್ಠಾನ ಕಾರ್ಯಗಳ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಲು ಕಾರ್ಯಾರಂಭ ಮಾಡಲಾಗಿದೆ ಈ ಉದ್ದೇಶ ಆಧರಿಸಿ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಕೇಂದ್ರಿಕರಿಸಿ “ವಿಷನ್-2025” ಡಾಕ್ಯುಮೆಂಟ್ ನೀಲನಕ್ಷೆ ರೂಪಿಸಬೇಕಿದೆ. ಈ ಸಂಬಂಧ ಜಿಲ್ಲೆಯ ಎಲ್ಲೆಡೆಯಿಂದ ವಿವಿಧ ಕ್ಷೇತ್ರಗಳ ನುರಿತ ಆಸಕ್ತರು ಹಾಗೂ ನಾಗರಿಕರ ವಿಶಾಲ ಅಭಿಪ್ರಾಯ, ಪ್ರತಿಕ್ರಿಯೆ ಮತ್ತು ಹೊಸ ಕಲ್ಪನೆಯ ವಿವರ ಪಡೆಯಲು ಉದ್ದೇಶಿಸಲಾಗಿದೆ.“ಅವಶ್ಯಕತೆ ಆಧರಿತ ಅಭಿವೃದ್ಧಿ” ವಿಷನ್-2025 ಪರಿಕಲ್ಪನೆಯ ವೈಶಿಷ್ಯವಾಗಿದ್ದು ಮುಂದಿನ 7 ವರ್ಷಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನೀವು ಏನು ಬಯಸುತ್ತೀರಿ? ಮುಖ್ಯವಾಗಿ ನಿಮಗೇನು ಬೇಕಿದೆ? ಎಂಬ ವಾಸ್ತವಿಕ ಮುನ್ನೋಟವನ್ನು ಆಧರಿಸಿ ಸಿದ್ಧಗೊಳ್ಳಲಿದೆ.

ಇದಕ್ಕಾಗಿ ಸರ್ಕಾರದ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಲಾಗಿದೆ. ವಿಷನ್ 2025 ಪರಿಕಲ್ಪನೆಯ ವಿವರಗಳನ್ನು visioಟಿ2025 ಞoಜಚಿgu @gmಚಿiಟ.ಛಿom ಇಲ್ಲಿಗೆ ಇ-ಮೇಲ್ ಮುಖಾಂತರ ಅಥವಾ Whಚಿಣsಚಿಠಿಠಿ ಓumbeಡಿ 9480869002 ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯ, ವಿಷನ್-2025 ವಿಭಾಗ, ಮಡಿಕೇರಿ ಈ ವಿಳಾಸಕ್ಕೆ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ ಕಳುಹಿಸಬಹುದಾಗಿದೆ. ವಿಷನ್-2025 ಯೋಜನೆಯ ಹೆಚ್ಚಿನ ವಿವರಗಳನ್ನು ಅಂತರ್ಜಾಲ ತಾಣ hಣಣಠಿs://ಟಿಚಿvಚಿಞಚಿಡಿಟಿಚಿಣಚಿಞಚಿ 2025.iಟಿ/ ದಿಂದ ಪಡೆಯ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕೋರಿದ್ದಾರೆ.