ಗೋಣಿಕೊಪ್ಪಲು, ಅ. 21: ಸುಳುಗೋಡು ಗ್ರಾಮದಲ್ಲಿ ಎರಡು ಕರುಗಳನ್ನು ಕೊಂದಿರುವ ಹುಲಿ ಒಂದು ಕರುವನ್ನು ಹೊತ್ತೊಯ್ದಿದ್ದು, ಕಟ್ಟಿ ಹಾಕಿದ್ದ ಕಾರಣಕ್ಕಾಗಿ ಮತ್ತೊಂದು ಕರುವನ್ನು ಹೊತ್ತೊಯ್ಯಲಾಗದೆ ಕೊಂದು ಹಾಕಿ ಕಾಡಿನತ್ತ ಸೇರಿಕೊಂಡಿದೆ. ಕೊಕ್ಕೇಂಗಡ ಸ್ವಾದೀನ್ ಬಿದ್ದಪ್ಪ ಎಂಬವರಿಗೆ ಸೇರಿದ ಕರುಗಳು ತೋಟದಲ್ಲಿ ಮೇಯುತ್ತಿದ್ದ ಸಂದರ್ಭ ಹುಲಿ ಧಾಳಿ ನಡೆಸಿದೆ. ಒಂದು ಕರುವನ್ನು ಮೇಯಲು ಬಿಟ್ಟು ಮತ್ತೊಂದನ್ನು ಕಟ್ಟಿ ಹಾಕಿದ್ದರು. ಬಿಟ್ಟಿದ್ದ ಕರುವನ್ನು ಕೊಂದು ಕಾಡಿಗೆ ಹೊತ್ತೊಯ್ದಿದೆ. ಇನ್ನೊಂದು ಕರುವನ್ನು ಕೊಂದು ಹಾಕಿದೆ. ಕಳೆದ ರಾತ್ರಿ ಕರುವನ್ನು ಕೊಟ್ಟಿಗೆಗೆ ಕರೆತರಲು ಹೋಗಿದ್ದ ಸಂದರ್ಭ ವಿಚಾರ ಗಮನಕ್ಕೆ ಬಂದಿದೆ.
ಧಾಳಿ ನಡೆಸಿದ ಜಾಗದ ಸಮೀಪ ಮಣ್ಣಿನಲ್ಲಿ ಹುಲಿಯ ಉಗುರಿನ ಗುರುತು ಪತ್ತೆಯಾಗಿದೆ.