ಗೋಣಿಕೊಪ್ಪಲು, ಅ. 21: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಎ. ಡಿವಿಷನ್ ಹಾಕಿ ಲೀಗ್‍ನ 3 ದಿನದ ಪಂದ್ಯಗಳಲ್ಲಿ 5 ತಂಡ ಗೆಲುವು ದಾಖಲಿಸಿವೆ. 1 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.ಮರ್ಕರಾ ಯುನೈಟೆಡ್ ತಂಡವು ಕೋಣನಕಟ್ಟೆ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮರ್ಕರಾ ಪರ 9 10, 30 ನೇ ನಿಮಿಷದಲ್ಲಿ ಫೈಸಲ್ ಹ್ಯಾಟ್ರಿಕ್ ಗೋಲು ಬಾರಿಸಿದರು. ಕೋಣನಕಟ್ಟೆ ಪರ 8ರಲ್ಲಿ ಅಚ್ಚಪ್ಪ, 19ರಲ್ಲಿ ವಿಕಾಸ್ ಗೋಲು ಹೊಡೆದರು. ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ಟವರ್ಸ್ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಅಂತ್ಯವಾಯಿತು. ಟವರ್ಸ್ ಪರ ನಾಣಯ್ಯ 26 ಹಾಗೂ 52ನೇ ನಿಮಿಷಗಳಲ್ಲಿ 2 ಗೋಲು, ಕೂಡಿಗೆ ಪರ 9ರಲ್ಲಿ ಹರ್ಷ, 57ನೇ ನಿಮಿಷದಲ್ಲಿ ಗಣೇಶ್ ಗೋಲು ಬಾರಿಸಿದರು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಸೋಮವಾರಪೇಟೆ ಡಾಲ್ಫಿನ್ಸ್ ತಂಡದ ವಿರುದ್ಧ 6-1 ಗೋಲುಗಳ ಜಯ ಸಂಪಾದಿಸಿತು. ಪೊನ್ನಂಪೇಟೆ ಪರ 11 ರಲ್ಲಿ ಯಶ್ವಂತ್, 21ರಲ್ಲಿ ತರುಣ್, 22ರಲ್ಲಿ ವಿವೇಕ್, 30ರಲ್ಲಿ ಹುಮೈಜ್, 32ರಲ್ಲಿ ಪೂವಣ್ಣ, 36ರಲ್ಲಿ ಅರ್ಜುನ್, ಡಾಲ್ಫಿನ್ಸ್ ಪರ 41 ರಲ್ಲಿ ದಯಾನಂದ್ 1 ಗೋಲು ಹೊಡೆದರು.

ಅಮ್ಮತ್ತಿ ಈಗಲ್ಸ್ ತಂಡವು ಮೂರ್ನಾಡು ಎಂಆರ್‍ಎಫ್ ವಿರುದ್ಧ 1-0 ಗೋಲುಗಳ ಗೆಲುವು ದಾಖಲಿಸಿತು. 43 ನೇ ನಿಮಿಷದಲ್ಲಿ ಅವಿನಾಶ್ ಗೋಲು ಹೊಡೆದರು.

ಹಾತೂರು ತಂಡವು ಬಾಡಗ ಎಸ್‍ಆರ್‍ಸಿ ವಿರುದ್ಧ 5-1 ಗೋಲುಗಳ ಗೆಲುವು ದಾಖಲಿಸಿತು. ಹಾತೂರು ಪರ 11 ಹಾಗೂ 46ನೇ ನಿಮಿಷಗಳಲ್ಲಿ ಸೋಮಣ್ಣ, 18 ಹಾಗೂ 43 ರಲ್ಲಿ ಗಣಪತಿ ತಲಾ 2 ಗೋಲು, 13 ರಲ್ಲಿ ನಿರನ್ 1 ಗೋಲು, ಬಾಡಗ ಪರ 45ನೇ ನಿಮಿಷದಲ್ಲಿ ಪ್ರಜ್ವಲ್ ಬೋಪಣ್ಣ ಏಕೈಕ ಗೋಲು ಹೊಡೆದರು.

ಚಾರ್ಮರ್ಸ್ ಹಾಗೂ ಬೇಗೂರು ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಡ್ರಾ ಫಲಿತಾಂಶ ನೀಡಿತು. ಚಾರ್ಮರ್ಸ್ ಪರ 4 ನೇ ನಿಮಿಷದಲ್ಲಿ ದೀಪಕ್, ಬೇಗೂರು ಪರ 8 ರಲ್ಲಿ ವಿನಯ್ ಗೋಲು ಹೊಡೆದರು. ಭಾನುವಾರ ಮಧ್ಯಾಹ್ನದ ನಂತರ 2 ಪಂದ್ಯಗಳು ಮಾತ್ರ ನಡೆಯಲಿದೆ.