ವೀರಾಜಪೇಟೆ, ಅ. 23: ಮಲಯಾಳಿ ಬಾಂಧವರ ಸಂಸ್ಕøತಿ, ಆಚಾರ ವಿಚಾರ, ಪದ್ಧತಿ ಪರಂಪರೆ ನಶಿಸಿ ಹೋಗದಂತೆ ಎಲ್ಲ ಉತ್ಸವ, ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಲ್ಲಿ ಹೂವಿನ ರಂಗೋಲಿ ಹಾಕಿ ಓಣಾಘೋಷವನ್ನು ಸ್ವಾಗತಿಸುವಂತಾಗಬೇಕು ಎಂದು ಮಡಿಕೇರಿ ನಗರ ಸಭೆಯ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು.
ಹಿಂದೂ ಮಲಯಾಳಿ ಸಂಘಟನೆ ವತಿಯಿಂದ ವೀರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಿತೀಯ ವರ್ಷದ ಓಣಂ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಮೇಶ್ ಮಾತನಾಡಿ ನಾವುಗಳು ಕೇರಳ ರಾಜ್ಯದವರಾದರೂ ಕೊಡಗಿನ ನೀರು, ಗಾಳಿಯನ್ನು ಸೇವಿಸುತಿದ್ದೇವೆ, ಕನ್ನಡದ ನೆಲ ಜಲವನ್ನು ಇಲ್ಲಿ ನೆಲೆಸಿರುವ ಬಾಂಧವರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಾತೃ ಭಾಷೆ ಮಲಯಾಳಿಯಾದರೂ ಇಲ್ಲಿನ ಕನ್ನಡ ಭಾಷೆಗೆ ಗೌರವ ನೀಡುವದು ಆದ್ಯ ಕರ್ತವ್ಯ. ಕೇರಳದಲ್ಲಿ ಆಚರಿಸುವ ಹಬ್ಬವನ್ನು ನಮ್ಮ ಮಕ್ಕಳು ಅರಿತು ಮುಂದುವರೆಯಲಿ ಎಂದು ನಾವುಗಳು ಇಲ್ಲಿಯೂ ಹಬ್ಬದ ಆಚರಣೆಯನ್ನು ಮುಂದುವರೆಸುತ್ತಿದ್ದೇವೆ. ಇತ್ತೀಚಿನ ದಿನಗ¼ಲ್ಲಿ ಕೆಲವು ಆಸಕ್ತರು ರಾಜಕೀಯವಾಗಿ ಜಾತೀಯ ವಿಷ ಬೀಜ ಬಿತ್ತಿ ಸಮಾಜದ ಶಾಂತಿಯನ್ನು ಕದಡುತ್ತಿರುವದು ಇಂದಿನ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ಆದರೆ ಭಾಷೆ ಜನಾಂಗ ಸಮುದಾಯದ ಮೇಲೆ ಪ್ರತಿಯೊಬ್ಬರಲ್ಲೂ ಅಭಿಮಾನವಿರಬೇಕು, ದುರಭಿಮಾನವಿಲ್ಲದೆ ಎಲ್ಲರೂ ಒಂದಾಗಿ ಸಂಘಟಿತರಾಗಿ ಸಮಾಜ ಸೇವೆಗೂ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಮಾತನಾಡಿ, ಕೇರಳದಲ್ಲಿ ಓಣಂ ಮತ್ತು ವಿಶು ಹಬ್ಬಗಳೆರಡು ವಿಶಿಷ್ಟವಾದಂತಹ ಉತ್ಸವ. ವಾದ್ಯ ಮೇಳದೊಂದಿಗೆ ಓಣಾಘೋಷ ಯಾತ್ರೆಗಳನ್ನು ಬಡ ಕಾರ್ಮಿಕರು- ಶ್ರೀಮಂತರು ಒಂದುಗೂಡಿ ಭಿನ್ನ ಬೇಧವಿಲ್ಲದೆ ಆಚರಿಸುವ ಸಲುವಾಗಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಹಚ್ಚಿನಾಡು ಕಡಕಣಿ ರೆಸಾರ್ಟ್ನ ವ್ಯವಸ್ಥಾಪಕ ಬಿ.ಸಿ.ಮಂಜುನಾಥ್ ಮಾತನಾಡಿ ಓಣಂ ಎಂಬುದು ಸಾಂಸ್ಕøತಿಕ ಹಬ್ಬ ಮಹಾಬಲಿ ಒಬ್ಬರಾಜನ ಕತೆಯಾಗಿದೆ. ಇದನ್ನು ಸಂಘಟನೆಯಿಂದ ಆಚರಿಸುತ್ತಿರುವದು ಉತ್ತಮ ಕಾರ್ಯ. ಭಾರತದಲ್ಲಿ ವಿದ್ಯಾವಂತರೆಂದರೆ ಕೇರಳ ರಾಜ್ಯದವರೇ ಹೆಚ್ಚು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತಾಗಬೇಕು ಎಂದರು.
ಕಣ್ಣಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಎನ್.ಮನೋಜ್ ಕಾರ್ಯಕ್ರಮ ಉದ್ಘಾಟಿಸಿದರು.
ಸಿದ್ದಾಪುರ ಕೈರಳಿ ಸಮಾಜದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ ಓಣಂ ಹಬ್ಬವನ್ನು ಕೇರಳದಲ್ಲಿ ಜಾತಿ ಬೇಧವಿಲ್ಲದೆ ಆಚರಿಸುತ್ತಾರೆ. ಒಂಟಿಯಂಗಡಿಯ ಮಲಯಾಳಿ ಬಾಂಧವರು ಕಳೆದ ಎರಡು ವರ್ಷದಿಂz ಓಣಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು ಇದೇ ಸಂಸ್ಕøತಿಯನ್ನು ತಮ್ಮ ಮಕ್ಕಳಿಗೂ ಕಲಿಸುವಂತಾಗಬೇಕು ಎಂದರು.
ಸೋಮವಾರಪೇಟೆ ಹಿಂದೂ ಮಲಯಾಳ ಸಮಾಜದ ಅಧ್ಯಕ್ಷ ಪಿ.ಡಿ.ಪ್ರಕಾಶ್, ಕಣ್ಣಂಗಾಲ ದೇವಾಲಯದ ಕೋರಂಡ ಬೆಳ್ಯಪ್ಪ, ಚಟ್ಟಳ್ಳಿ ಮಲಯಾಳಿ ಸಂಘದ ಅಧ್ಯಕ್ಷ ಶಶಿಕುಮಾರ್, ಮರಗೋಡು ಮಲಯಾಳಿ ಸಂಘದ ಬಾಲಕೃಷ್ಣ, ಒಂಟಿಯಂಗಡಿ ಕೆ.ಚಂದ್ರು, ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಪಿ.ಎನ್.ಅಚ್ಚುತ್ತನ್, ಒಂಟಿಯಂಗಡಿ ಶಾಲಾ ಮುಖ್ಯೋಪಧ್ಯಾಯಿನಿ ಸಿ.ಎ.ಲಿಲ್ಲಿ, ಶಿಕ್ಷಕಿ ಸುಶಾ, ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ಅಯ್ಯಪ್ಪ ದೇವಾಲಯದಿಂದ ಸಿಂಗಾರಿ ವಾದ್ಯಮೇಳದೊಂದಿಗೆ ಮೆರವಣಿಗೆಗೆ ಒಂಟಿಯಂಗಡಿ ಹಿಂದೂ ಮಲಯಾಳಿ ಸಂಘದ ಉಪಾಧ್ಯಕ್ಷ ಪಿ.ಕೆ.ಭಾಸ್ಕರನ್ ಚಾಲನೆ ನೀಡಿದ ಬಳಿಕ ಮುಖ್ಯ ಬೀದಿಯಲ್ಲಿ ಸಿಂಗಾರಿ ವಾದ್ಯಮೇಳದೊಂದಿಗೆ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೂರ್ನಾಡು ಹಿಂದೂ ಮಲಯಾಳಿ ಸಂಘಟನೆಯ ಗೀತಾ ತಂಡದಿಂದ ವೇದಿಕೆಯಲ್ಲಿ ತಿರುವಾಧಿರ ನೃತ್ಯ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಂಟಿಯಂಗಡಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಸಿ.ಪುಷ್ಕರನ್ ವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಹಿಂದೂ ಮಲಯಾಳಿ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಎಂ.ಎಂ. ಶಶಿಧರನ್ ಸ್ವಾಗತಿಸಿ, ನಿರೂಪಿಸಿದರು. ನಂತರ ಓಣಂ ಸದ್ಯ ನಡೆಯಿತು. ಇದಕ್ಕೂ ಮೊದಲು ಬೆಳಿಗ್ಗೆ 9 ಗಂಟೆಗೆ ಪೂಕಳಂ ಸ್ಪರ್ಧೆಯನ್ನು ಮಲಯಾಳಿ ಸಂಘದ ರಾಧ ವಿಜಯನ್ ಉದ್ಘಾಟಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಸಿ.ಕೆ.ನಂದಕುಮಾರ್, ಟಿ.ಎಂ.ಸುನಿಲ್, ಮತ್ತು ಹಾಗೂ ಪದಾಧಿಕಾರಿಗಳು ಹಾಜರಿದ್ದರು.