ಗೋಣಿಕೊಪ್ಪಲು, ಅ. 23: ಶ್ರೀಮಂಗಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಂದು ಹೇಳಿಕೊಂಡು ಎಂ.ಟಿ. ಕಾರ್ಯಪ್ಪ ಎಂಬವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶ್ರೀಮಂಗಲ ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.

ಬೇರೆ ಪದಾಧಿಕಾರಿಗಳೇ ಇಲ್ಲದ ಈ ಸಮಿತಿಯಲ್ಲಿ ಸಮಿತಿಯ ಹೆಸರಿನಲ್ಲಿ ಎಲ್ಲಾ ಸ್ಥಾನವನ್ನು ಕಾರ್ಯದರ್ಶಿ, ಖಜಾಂಚಿ ಸದಸ್ಯ ಎಲ್ಲಾ ಇವರೊಬ್ಬರೇ ನಿರ್ವಹಿಸಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಚೋನೀರ ಕಾಳಯ್ಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಶ್ರೀಮಂಗಲದಲ್ಲಿ ಎರಡು ಬ್ಯಾಂಕ್‍ಗಳ ಕಾನೂನು ಸಲಹೆಗಾರ ಎಂದು ಜನರಿಗೆ ಸಾಲದ ವಿಚಾರದಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಕಿರುಕುಳ ಕೊಡಿಸುತ್ತಾ, ಗ್ರಾಮದ ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶ್ರೀಮಂಗಲದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುವ ಗೌರಿ ಉತ್ಸವದಲ್ಲಿ 5 ಸಾವಿರಕ್ಕೂ ಅಧಿಕ ಗ್ರಾಮಸ್ಥರು ಸೇರುತ್ತಾರೆ. ಸಂಜೆಯ ಸಾಂಸ್ಕøತಿಕ ಹಾಗೂ ಅನ್ನದಾನ ಕಾರ್ಯಕ್ರಮ ಸಂದರ್ಭ; ಹಾಗೂ ಪೂಜಾ ಕಾರ್ಯಕ್ರಮಕ್ಕೂ ತೊಂದರೆ ನೀಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು.

ಇವರ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾ.ಪಂ. ಸದಸ್ಯ ಅಜ್ಜಮಾಡ ಜಯ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆಡಳಿತ ಮಂಡಳಿ ಮೇಲೆ ನಿರಂತರವಾಗಿ ಇಲ್ಲಸಲ್ಲದ ಆರೋಪ ಮಾಡುವ ಇವರುಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎನ್. ಮುತ್ತಣ್ಣ, ಗ್ರಾ.ಪಂ. ಸದಸ್ಯ ಕಲ್ಪನಾ ತಿಮ್ಮಯ್ಯ, ಬೆಳೆಗಾರರ ಒಕ್ಕೂಟ ಕಾರ್ಯದರ್ಶಿ ಬಿ.ಪಿ. ದೇವಯ್ಯ ಉಪಸ್ಥಿತರಿದ್ದರು.