ಗೋಣಿಕೊಪ್ಪಲು, ಆ. 22: ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಂಗನವಾಡಿ ನೌಕರರ ವಿರುದ್ಧ ನಡೆಯುತ್ತಿರುವ ಧೋರಣೆಯ ಬಗ್ಗೆ ಹೋರಾಡಲು ನವೆಂಬರ್ 9 ಮತ್ತು 10 ರಂದು ದೆಹಲಿ ಚಲೋ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದ ತಿಳಿಸಿದರು.

ಇಲ್ಲಿನ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಯೋಜನೆಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ಅಂಗನವಾಡಿ ನೌಕರರನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾರ್ಯಕರ್ತೆ ಯರಿಗೆ ಕನಿಷ್ಟ ವೇತನ ನೀಡದೆ ಕಡೆಗಣನೆ ಮಾಡುತ್ತಿದೆ. ಬೇರೆ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10,000 ಗೌರವಧನ ದೊರೆಯುತ್ತಿದೆ. ಇಲ್ಲಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡುವಾಗ ಹಲವಾರು ನೀತಿಗಳನ್ನು ನೀಡಿ, ಕೆಲಸದಿಂದ ತೆಗೆಯುವ ಸಂದರ್ಭ ಯಾವದೇ ಮಾಹಿತಿ ನೀಡದೆ ಕಿತ್ತೊಗೆಯುವ ನೀತಿ ಅನುಸರಿಸುತ್ತಿದೆ. ಸರ್ಕಾರ ಸರಿಯಾದ ನೀತಿ ಅಳವಡಿಸುವ ಮೂಲಕ ಕಾರ್ಯಕರ್ತೆಯರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಇ.ರಾ. ದುರ್ಗಾ ಪ್ರಸಾದ್ ಮಾತನಾಡಿ, ಅಂಗನವಾಡಿ ಸನ್ಮಾನಿಸಲಾಯಿತು.

ಅಂಗನವಾಡಿ ನೌಕರರ ಸಂಘದ ಯೋಜನೆಗಳು ಮತ್ತು ಪ್ರಯೋಜನಗಳ ಮಾಹಿತಿಯನ್ನು ಅಂಗನವಾಡಿ ನೌಕರರಿಗೆ ನೀಡಲಾಯಿತು. ವೀರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್. ಸುಮಿತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಜಿಲ್ಲಾ ವರ್ಕಸ್ರ್ಸ್ ಯೂನಿಯನ್ ಕಾರ್ಯದರ್ಶಿ ಎ. ಮಹದೇವ್, ಜಿಲ್ಲಾ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್, ತಾಲೂಕು ಕ್ಷೇಮ ನಿಧಿ ಅಧ್ಯಕ್ಷೆ ಬಿ.ಕೆ. ಸರೋಜ ಪಾಲ್ಗೊಂಡಿದ್ದರು. ತಾಲೂಕಿನ ನೌಕರರು ಪಾಲ್ಗೊಂಡು ಸರ್ಕರದ ಸವಲತ್ತು ನೀಡಲು ಕಾರ್ಯಕರ್ತೆಯರನ್ನು ಯಾರು ಪರಿಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ಆಹಾರ ತಯಾರಿಸಲು ಸರಿಯಾದ ಸಾಮಗ್ರಿಗಳು ಇಲ್ಲ. ಆದರೂ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.