ಶ್ರೀಮಂಗಲ, ಅ. 22: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.ಬೆಂಗಳೂರು ಮೂಲದ ವಿಜಯ್ಕುಮಾರ್ ಎಂಬವರಿಗೆ ಸೇರಿದ ತೋಟದ ಉಸ್ತುವಾರಿಯನ್ನು ನೋಡುಕೊಳ್ಳುತ್ತಿದ್ದ ಪೊನ್ನಂಪೇಟೆಯ ಸುಂದರಮ್ಮ (68) ಹತ್ಯೆಗೀಡಾದ ದುರ್ದೈವಿ. ಇಂದು ಸುಂದರಮ್ಮ ಅವರ ಮೊಬೈಲ್ಗೆ ಸಂಬಂಧಿಕರು ಕರೆ ಮಾಡಿದ ಸಂದರ್ಭ ಅನ್ಯ ವ್ಯಕ್ತಿಗಳು ಮಾತನಾಡಿದ್ದು, ಇದರಿಂದ ಸಂದೇಹಗೊಂಡ ಸುಂದರಮ್ಮ ಅವರ ಅಕ್ಕನ ಮಗ ಅಯ್ಯಪ್ಪ ಅವರು ಬಾಡಗರಕೇರಿ ಗ್ರಾಮದಲ್ಲಿ ಸುಂದರಮ್ಮ ಅವರು ವಾಸವಿದ್ದ ಮಾಲೀಕರ ಮನೆಗೆ ತೆರಳಿ ಪರಿಶೀಲಿಸಿದಾಗ ಸುಂದರಮ್ಮ ಅವರ ಕಾಲಿಗೆ ಬಟ್ಟೆ ಕಟ್ಟಿ ತಲೆಗೆ ತೀವ್ರ ಹಲ್ಲೆ ನಡೆಸಿ ರಕ್ತಸ್ತಾವ್ರದಿಂದ ಸುಂದರಮ್ಮ ಕೊಲೆಯಾಗಿರುವದು ಗೋಚರಿಸಿದೆ.
ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ.
ಕುಟ್ಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಶ್ರೀಮಂಗಲ ಉಪನಿರೀಕ್ಷಕ ಹೆಚ್.ಸಿ. ಸಣ್ಣಯ್ಯ ತನಿಖೆ ಕೈಗೊಂಡಿದ್ದಾರೆ.