ವೀರಾಜಪೇಟೆ, ಅ.22: ಆಧುನಿಕತೆಯನ್ನು ಪ್ರತಿಬಿಂಬಿಸುವ ಸಮುದಾಯದ ಸಂಸ್ಕøತಿ, ಪರಂಪರೆ, ಪದ್ಧತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಮುದಾಯದಿಂದಲೇ ಆಗಬೇಕು. ಸಮುದಾಯದ ಪ್ರತಿಯೊಬ್ಬರಲ್ಲು ಈ ಆಸಕ್ತಿ ಮೂಡಿಬರಬೇಕು ಎಂದು ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೋಟ್ಟಕೇರಿ ಯನ ಲಾವಣ್ಯ ಅರುಣ್ ಕುಮಾರ್ ಹೇಳಿದರು.

ವೀರಾಜಪೇಟೆ ಗೌಡ ಸಮಾಜದಿಂದ ವೀರಾಜಪೇಟೆ ಬಳಿಯ ಕೆ.ಬೋಯಿಕೇರಿಯ ಕುರುಂಜಿ ಜಾನಕಿ ವೆಂಕಟರಮಣ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕೈಲು ಮಹೂರ್ತ ಸಂತೋಷ ಕೂಟದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ ಗೌಡ ಜನಾಂಗದ ಆಚಾರ ವಿಚಾರಗಳು ಶಾಶ್ವತ ಉಳಿಯುವಂತೆ ಮಾಡಲು ಸಮುದಾಯದ ಯುವ ಜನಾಂಗಕ್ಕೆ ಉತ್ತೇಜನ ನೀಡಬೇಕು. ಗೌಡ ಫೇಡರೇಶನ್, ಗೌಡ ಸಮಾಜದ, ಸಮುದಾಯ ಬಾಂಧವರ ಹಿತರಕ್ಷಣೆಗಾಗಿ ನಿರಂತರ ಹೋರಾಡುತ್ತಿದೆ. ಇದಕ್ಕೆ ಎಲ್ಲ ಗೌಡ ಸಮಾಜಗಳ ಸಹಕಾರ ಅಗತ್ಯ ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯನಂದಾ, ಸ್ಪೈಸಸ್ ಬೋರ್ಡ್‍ನ ನಿವೃತ್ತ ಅಸಿಸ್ಟಂಟ್ ಡೈರೆಕ್ಟರ್ ಅಯ್ಯಂಡ್ರ ಗಿರೀಶ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ದಂಬೇಕೋಡಿ ಕಾರ್ಯಪ್ಪ ಮತ್ತಿತರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೌಡ ಸಮಾಜದ ಅಧ್ಯಕ್ಷ ಮೂಡಗದ್ದೆ ಪಿ.ರಾಮಕೃಷ್ಣ ಮಾತನಾಡಿ ಸಮುದಾಯದ ಆಚಾರ - ವಿಚಾರಗಳು ಹುಟ್ಟಿನಿಂದ ಸಾವಿನವರೆಗೆ ಸಮುದಾಯದ ಪ್ರತಿಯೊಬ್ಬರು ನಿಷ್ಠೆಯಿಂದ ಆಚರಿಸುವಂತಾಗಬೇಕು. ಸಮುದಾಯದ ಪದ್ಧತಿ ಸಂಪ್ರದಾಯಗಳು ನಶಿಸಿ ಹೋಗದಂತೆ ಕಾಪಾಡುವದು ಸಂಘಟನೆಯೊಂದಿಗೆ ಸಮುದಾಯದ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.

ಸಮಾಜದ ಉಪಾಧ್ಯಕ್ಷ ಚೆಟ್ಟಿನೆರವನ ಪಿ.ಚಂದ್ರಶೇಖರ್ ಸ್ವಾಗತಿಸಿದರು. ಗೌಡುದಾರೆ ಚೋಟು ಬಿದ್ದಪ್ಪ ನಿರೂಪಿಸಿದರು. ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಜಂಟಿ ಕಾರ್ಯದರ್ಶಿ ಪಿ.ಪಾರ್ವತಿ ಗಣಪತಿ ವಂದಿಸಿದರು. ಸಮಾಜದ ಕಾರ್ಯದರ್ಶಿ ಚಂಡೀರ ಎ.ಸುಂದರ, ಖಜಾಂಚಿ ತೆಕ್ಕಡ ಎಂ.ಗಣಪತಿ, ತೋಟಂಬೈಲು ಕಾವೇರಮ್ಮ ಇತರ ನಿದೇರ್ಶಕರುಗಳು ಹಾಜರಿದ್ದರು.

ಕೈಲು ಮಹೂರ್ತ ಹಬ್ಬದ ಆಚರಣೆಯ ಪ್ರಯುಕ್ತ ಬೆಳಿಗ್ಗೆ ಏರ್ಪಡಿಸಿದ್ದ ಕ್ರೀಡಾ ಕೂಟವನ್ನು ಮಾಜಿ ಸೈನಿಕರು, ಕೃಷಿಕರು, ಸಮಾಜಸೇವಕರಾದ ಚಂಡೀರ ಕೆ.ವಿಜಯ ಕುಮಾರ್ ಅವರು ಇಲ್ಲಿನ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಉದ್ಘಾಟಿಸಿದರು.

ಕ್ರೀಡಾಕೂಟದ ವಿಜೇತರು

ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ನರಿಯಂದಡ ಗ್ರಾಮದ ನಂದಿನಿ ಫ್ರೆಂಡ್ಸ್ ಪ್ರಥಮ, ಪುರುಷರ ಹಗ್ಗ ಜಗ್ಗಾಟದಲ್ಲಿ ನರಿಯಂದಡ ಫ್ರೆಂಡ್ಸ್ ಪ್ರಥಮ ಸ್ಥಾನ ಗಳಿಸಿದg,É ಸ್ಲೋ ಬೈಕ್ ರೇಸ್‍ನಲ್ಲಿ ಡಿ.ನಿತೀನ್, ಪ್ರಥಮ, ಡಿ.ಮೋಹನ್ ದ್ವಿತೀಯ ಹಾಗೂ ಬಿ.ಪ್ರದೀಪ್ ತೃತೀಯ ಬಹುಮಾನಗಳನ್ನು ಪಡೆದರು.