ವೀರಾಜಪೇಟೆ, ಅ. 22: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಪೆÇ್ರ. ಬಿ.ವಿ. ರಮಣ ಅವರ 113ನೇ ಹುಟ್ಟು ಹಬ್ಬವನ್ನು ಸಂಸ್ಥಾಪಕರ ದಿನವನ್ನಾಗಿ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಹೆಚ್. ಎಸ್. ಗೋಪಾಲ ಕೃಷ್ಣ, ಆದಾಯ ಇಲಾಖೆ, ಕರ್ನಾಟಕ ಸರಕಾರ ಹಾಗೂ ನಿವೃತ್ತ ಶಿಕ್ಷಕಿ ರಾಜಮ್ಮ, ಪೆÇ್ರ. ಬಿ.ವಿ. ರಮಣ ಅವರ ಮೇರು ವ್ಯಕ್ತಿತ್ವವನ್ನು ಕೊಂಡಾಡಿದರು. ಹೆಚ್.ಎಸ್. ರಾಮು ರಮಣ ಅವರೊಂದಿಗೆ ಕಳೆದ ತಮ್ಮ ಅಧ್ಯಾಪನಾ ದಿನಗಳನ್ನು ಮೆಲುಕು ಹಾಕಿದರು. ಸೂರ್ಯ ಕುಮಾರಿ, ವಾಸಂತಿ ಹಾಗೂ ವಾಣಿ ಪೆÇ್ರ. ಬಿ.ವಿ. ರಮಣ ಅವರಿಂದ ಕಲಿತ ಸರಳತೆ, ವೃತ್ತಿಪರತೆ ಹಾಗೂ ಬದ್ಧತೆಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಇದು ಆದರ್ಶವಾಗಬೇಕೆಂದು ಹಾರೈಸಿದರು.
ಬಿ.ವಿ. ಶಶಿಕಲಾ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ರಮಣ ಅವರು ಬರೆದ ಸುಮಾರು 22 ಪುಸ್ತಕಗಳ ಪ್ರದರ್ಶನ ದಿನದ ವಿಶೇಷವಾಗಿತ್ತು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು.