ಶ್ರೀಮಂಗಲ, ಅ. 23: ಕಾವೇರಿ ಪುಣ್ಯ ತೀರ್ಥವನ್ನು 18ರಂದು ನಡೆದ ಕಾವೇರಿ ಚಂಗ್ರಾಂದಿಯಂದು ಭಕ್ತಾಧಿಗಳಿಗೆ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ವಿತರಿಸಿ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ 5ನೇ ದಿನದ ಜನೋತ್ಸವವು ಬೆಕ್ಕೆಸೊಡ್ಲೂರು ಶ್ರೀ ಮಂದತ್ತವ್ವ ಟ್ರಸ್ಟ್ ಸದಸ್ಯರ ಸಾಂಸ್ಕøತಿಕ ಕಾರ್ಯಕ್ರಮ ದೊಂದಿಗೆ ಯಶಸ್ವಿಯಾಗಿ ಜರುಗಿತು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಟಿ. ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆಯ ಸಂಯುಕ್ತ ಆಶÀ್ರಯದಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವದಲ್ಲಿ ಭಾನುವಾರ ಸಂಜೆ 4ಗಂಟೆಗೆ ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಂಗು ರಂಗಿನ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ವೇದಿಕೆ ತೆರೆದುಕೊಂಡಿತು. ಕಾವೇರಿಯನ್ನು ಕೊಂಡಾಡುವ ಕೊಡವ ಗೀತೆಗಳು, ಹಾಗೂ ನೃತ್ಯಗಳು, ಗೆಜ್ಜೆತಂಡ್ ನೃತ್ಯ ರೂಪಕ, ಬಿಂದಿಗೆ ನೀರೆಡ್‍ತಂಡ್ ಹಾಡಿಗೆ ಹೆಜ್ಜೆ ಹಾಕಿದ ನೃತ್ಯ ಕಲಾವಿದರು ಕೊಡವತಿಯರ ಸೌಂದರ್ಯದ ವರ್ಣನೆಯ ಹಾಡಿಗೆ ಮೆರುಗು ನೀಡಿದರು. ಇದರೊಂದಿಗೆ ಕೊಡವ ಸಾಂಪ್ರದಾಯಿಕ ನೃತ್ಯ, ಉಮ್ಮತ್ತಾಟ್, ಪರೆಯಕಳಿ ಸೇರಿದಂತೆ ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ನೆರೆದಿದ್ದವರನ್ನು ಕಲಾ ಸಾಮ್ರಾಜ್ಯದಲ್ಲಿ ಮುಳುಗುವಂತೆ ಮಾಡಿತು.
ಈ ಸಂದರ್ಭ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಹಿರಿಯರಾದ ಬಾಚರಣಿಯಂಡ ನಾಣಯ್ಯರವರು ಮಾತನಾಡಿ, ಹತ್ತು ದಿನಗಳ ಚಂಗ್ರಾಂದಿ ಜನೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವದು ಶ್ಲಾಘನೀಯ ಎಂದರು.
ಮತ್ತೋರ್ವ ಅತಿಥಿ ಕಾರ್ಯಕ್ರಮದ ಪ್ರಾಯೋಜಕರಾದ ಚಟ್ಟಂಡ ವಿಜು ಗಣಪತಿ ಮಾತನಾಡಿ ನಮ್ಮದೇ ಆದ ಕಾವೇರಿ ಚಂಗ್ರಾಂದಿ ಹಬ್ಬವನ್ನು ಜನೋತ್ಸವದ ರೀತಿಯಲ್ಲಿ ನಡೆಸುವದು ನಮ್ಮೆಲ್ಲರ ಜವಾಬ್ದಾರಿ ಯಾಗಿದ್ದು, ಎಲ್ಲರೂ ತಮ್ಮ ಮನೆಯ ಕೆಲಸವೆಂದು ಭಾವಿಸಿ ಈ ಕಾರ್ಯ ಕ್ರಮಕ್ಕೆ ಕೈಜೋಡಿಸಬೇಕಿದೆ. ಪ್ರಪ್ರಥಮ ವಾಗಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಆರಂಭಿಸಿರುವ ಚಂಗ್ರಾಂದಿ, ಪತ್ತಾಲೋದಿ ಜನೋತ್ಸವವು ಎಲ್ಲಾ ಕೊಡವ ಸಮಾಜದ ಆಶ್ರಯದಲ್ಲಿ ನಡೆಯು ವಂತಾದರೆ ಕೊಡವ ಸಂಸ್ಕøತಿಯ ಉಳಿವಿಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಪ್ರಾಯೋಜಕ ರಾದ ಚೆಟ್ಟಂಗಡ ನಾಚಪ್ಪ, ಕಾವೇರಮ್ಮ ನಾಚಪ್ಪ ಹಾಗೂ ಚಟ್ಟಂಡ ಶಾಲಿನಿ ಗಣಪತಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕಾಳಿಮಾಡ ಕೆ. ಶಿವಪ್ಪರವರು ಈ ರೀತಿಯ ಕಾರ್ಯಕ್ರಮದಿಂದ ಮುಂದಿನ ಪೀಳಿಗೆಗೆ ಕೊಡವರ ಹಬ್ಬ ಹರಿದಿನ ಹಾಗೂ ಸಂಸ್ಕøತಿಯ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.