ಕೂಡಿಗೆ, ಅ. 22: ತೊರೆ ನೊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಹಾಗೂ ಆಟೋ ನಡುವೆ ಅಪಘಾತ ನಡೆದಿದೆ.
ಕರ್ತವ್ಯ ನಿಮಿತ್ತ ಶನಿವಾರಸಂತೆಗೆ ಬೈಕ್‍ನಲ್ಲಿ (ಕೆ.ಎ. 12 ಜೆ. 7029) ತೆರಳುತ್ತಿದ್ದ ಪೆÇಲೀಸ್ ಪೇದೆಗಳಿಬ್ಬರಿಗೆ ಎದುರುನಿಂದ ಬರುತಿದ್ದ ಹೆಬ್ಬಾಲೆಯ ಆಟೋ ಸಂಖ್ಯೆ (ಕೆ.ಎ. 12 ಬಿ. 2150) ವೇಗವಾಗಿ ಬಂದು ಅಪ್ಪಳಿಸಿದೆ. ಪರಿಣಾಮ ಪೆÇಲೀಸ್ ಪೇದೆಗಳಾದ ಲೋಕೇಶ್ ಮತ್ತು ರವೀಂದ್ರ ಇವರುಗಳಿಗೆ ಕಾಲು ಹಾಗೂ ಕೈ ಮುರಿದಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಲೋಕೆಶ್‍ನನ್ನು ಮಂಗಳೂರಿಗೆ ಹಾಗೂ ರವೀಂದ್ರನನ್ನು ಮೈಸೂರಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೆÇೀಲೀಸ್ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.