ನಾಪೆÉÇೀಕ್ಲು, ಅ. 23: ನಾಪೆÉÇೀಕ್ಲುವಿನಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಾರುಕಟ್ಟೆಯನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಮಾರುಕಟ್ಟೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅವರ ಅನುದಾನ 4 ಲಕ್ಷ, ಆರ್‍ಎಂಸಿ ವತಿಯಿಂದ 2.25 ಲಕ್ಷ, ತಾಲೂಕು ಪಂಚಾಯಿತಿ ವತಿಯಿಂದ 1.25 ಲಕ್ಷ ಮಂಜೂರಾಗಿದ್ದು, ಉಳಿದ ಮೊತ್ತವನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ಕಾಂಗ್ರೆಸ್ ಮುಖಂಡ ನಾಪೆÉÇೀಕ್ಲು ಭಗವತಿ ದೇವಳದ ಕಾರ್ಯದರ್ಶಿ ಅರೆಯಡ ಡಿ.ಸೋಮಪ್ಪ ಮಾತನಾಡಿ ಈ ವಿಭಾಗದ ಜನಕ್ಕೆ ಮಾರುಕಟ್ಟೆ ದೊಡ್ಡ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಗ್ರಾಮ ಪಂಚಾಯಿತಿ ಆಡಳಿತ ಮಾರುಕಟ್ಟೆಗೆ ನೂತನ ಕಟ್ಟಡ ನಿರ್ಮಿಸಿ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಆರ್.ಎಂ.ಸಿ. ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಮಾಚೇಟಿರ ಕುಶಾಲಪ್ಪ, ಮಹಮ್ಮದ್ ಖುರೇಶಿ, ಕೆ.ಎ.ಹ್ಯಾರೀಸ್, ಟಿ.ಎ.ಮಹಮ್ಮದ್, ಪಿ.ಎಂ.ರಷೀದ್, ಪಿ.ಎಂ.ಅಬ್ದುಲ್ ಅಜೀಜ್, ಚೋಕಿರ ರೋಷನ್, ಎಂ.ಎಂ. ಅಮೀನಾ, ಕುಲ್ಲೇಟಿರ ಜ್ಯೋತಿ ನಾಚಪ್ಪ, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಮೋಹಿನಿ, ಪಿ.ಸಿ.ಅಕ್ಕಮ್ಮ, ಪುಲ್ಲೇರ ಪದ್ಮಿನಿ, ಸುಶೀಲಮ್ಮ, ಟಿ.ಎ.ಉಂಬಾಯಿ, ಪಿ.ಡಿ.ಓ. ಟಿ.ಆರ್.ಕೇಶವ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಬೊಪ್ಪಂಡ ವೇಣು ಸುಬ್ಬಯ್ಯ, ಶಿವಚಾಳಿಯಂಡ ಕುಟ್ಟಪ್ಪ ಇದ್ದರು.