ಗೋಣಿಕೊಪ್ಪಲು, ಅ. 22: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಎ. ಡಿವಿಷನ್ ಹಾಕಿ ಲೀಗ್‍ನ 4 ದಿನದ ಪಂದ್ಯಗಳಲ್ಲಿ ಪೊದ್ದ್‍ಮಾನಿ ಹಾಗೂ ಬಿಬಿಸಿ ತಂಡಗಳು ಜಯ ಸಾಧಿಸಿದವು.
ಪೊದ್ದ್‍ಮಾನಿ ತಂಡವು ಬೇರಳಿನಾಡು ಯುಎಸ್‍ಸಿ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಸೋಲಿಸಿತು. ಪೊದ್ದ್‍ಮಾನಿ ಪರ 33ರಲ್ಲಿ ಅಚ್ಚಯ್ಯ, 43ರಲ್ಲಿ ಸುಬ್ಬಯ್ಯ, 48ರಲ್ಲಿ ಅಯ್ಯಣ್ಣ, ಬೇರಳಿನಾಡು ಪರ 24ರಲ್ಲಿ ಆಕಾಶ್, 36ರಲ್ಲಿ ಕಾಳಪ್ಪ ಗೋಲು ಬಾರಿಸಿದರು.
ಬಿಬಿಸಿ ತಂಡವು ಕಾಕೋಟುಪರಂಬು ಅರ್‍ಎಸ್‍ಸಿ ತಂಡದ ವಿರುದ್ದ 2-1 ಗೋಲುಗಳಿಂದ ಜಯ ಪಡೆಯಿತು. ಬಿಬಿಸಿ ಪರ 9ರಲ್ಲಿ ವಿಘ್ನೇಶ್, 36ರಲ್ಲಿ ಸೋಮಣ್ಣ, ಕಾಕೋಟುಪರಂಬು ಪರ 41ರಲ್ಲಿ ಚೇತನ್ ಗೋಲು ಹೊಡೆದರು.